ಮೂಡುಬಿದಿರೆಯಲ್ಲಿ 2 ತಿಂಗಳ ಉಚಿತ ಟೈಲರಿಂಗ್ ತರಬೇತಿ  ಸಮಾರೋಪ

ಮೂಡುಬಿದಿರೆಯಲ್ಲಿ 2 ತಿಂಗಳ ಉಚಿತ ಟೈಲರಿಂಗ್ ತರಬೇತಿ ಸಮಾರೋಪ


ಮೂಡುಬಿದಿರೆ: ಬ್ಯಾಂಕ್ ಆಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಹಾಗೂ ವೀಚೀಸ್ ಕೌಶಲ್ಯ ತರಬೇತಿ ಕೇಂದ್ರ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ 2 ತಿಂಗಳ ಉಚಿತ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ ಸಮಾಜಮಂದಿರ ಸಭಾಂಗಣದಲ್ಲಿ ಬುಧವಾರ ನಡೆಯಿತು. 

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಜ್ಯೋತಿ ರಾಜ್ ತರಬೇತಿ ಪಡೆದ ಮಹಿಳೆಯರ ಆಸಕ್ತಿಯನ್ನು ಪ್ರಶಂಸಿಸಿ "ಟೈಲರಿಂಗ್ ಎಂಬುದು ಯಾವಾಗಲೂ ಬೇಡಿಕೆಯಲ್ಲಿ ಇರುವ ಉದ್ಯೋಗವಾಗಿದ್ದು ಸರಿಯಾಗಿ ತರಬೇತಿ ಪಡೆದರೆ ಜೀವನ ಸಾಗಿಸಲು ಉತ್ತಮ ಅವಕಾಶವಿದ್ದು ಬ್ಯಾಂಕ್ ಅಥವಾ ಸ್ವ ಸಹಾಯ ಒಕ್ಕೂಟಗಳಿಂದ ಸಾಲ ಸೌಲಭ್ಯ ಪಡೆದು ತಮ್ಮದೇ ವ್ಯಾಪಾರ ಶುರು ಮಾಡಿ ಆರ್ಥಿಕವಾಗಿ ಸ್ವಾವಲಂಬಿ ಜೀವನ ಸಾಗಿಸಲು ಮಹಿಳೆಯರಿಗೆ ಈ ತರಬೇತಿ ಸಹಾಯವಾಗುತ್ತದೆ" ಎಂದರು.

ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕರಾದ  ಜೀವನ್ ಕೊಲ್ಯ ಮಾತಾಡುತ ಮಹಿಳೆಯರು ತಮ್ಮ ಆಸಕ್ತಿಯಿಂದ  ವಿನೂತನ ರೀತಿಯ ವಸ್ತ್ರ ವಿನ್ಯಾಸ ಮಾಡಿ ಸ್ವ ಉದ್ಯೋಗ ಮಾಡಲು ಇರುವ ಬೇರೆ ಬೇರೆ ಅವಕಾಶಗಳ ಬಗ್ಗೆ ತಿಳಿಸಿ ಅದನ್ನು  ಸದ್ಬಳಕೆ ಮಾಡಲು ಕರೆನೀಡಿದರು. ವೀಚೀಸ್  ಕೌಶಲ್ಯ ಕೇಂದ್ರದ ನಿರ್ದೇಶಕಿ ಶುಭಲಕ್ಷ್ಮೀ ಮಾತಾಡುತ ತರಬೇತಿ ನಂತರ  ಯಾವ ರೀತಿ ಉದ್ಯೋಗ ಮಾಡಲು ಸಾಧ್ಯವಿದೆ, ಕೌಶಲ್ಯ ಕಲಿತು ಅದನ್ನು ಮರೆಯದೇ ಗುಂಪು ಚಟುವಟಿಕೆ ಮಾಡುವ ಬಗ್ಗೆ ತಿಳಿಸಿದರು. 

ಸ್ವ ಉದ್ಯೋಗ ಪಡೆದ ಮಹಿಳೆಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಸಂಪನ್ಮೂಲ ವ್ಯಕ್ತಿಯಾದ ಅನಿತ ಆನಂದ್ ಒಂಟಿಕಟ್ಟೆ ಉಪಸ್ಥಿತರಿದ್ದರು. 

ಯೋಗಿತ ಸ್ವಾಗತಿಸಿದರು. ಆರತಿ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸುಮ ಕಾರ್ಕಳ ವಂದಿಸಿದರು.

ಮೂಡುಬಿದಿರೆ ಹಾಗೂ ಸುತ್ತಮುತ್ತಲ ಗ್ರಾಮದ ಸುಮಾರು 26 ಮಹಿಳೆಯರು ತರಬೇತಿಯಲ್ಲಿ  ಭಾಗವಹಿಸಿ ಪ್ರಮಾಣಪತ್ರ ಪಡೆದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article