'ಪಿನಾಕಲ್-2026' ಬ್ಯಾನರ್ ಅನಾವರಣ ಮತ್ತು ಉದ್ಘಾಟನೆ

'ಪಿನಾಕಲ್-2026' ಬ್ಯಾನರ್ ಅನಾವರಣ ಮತ್ತು ಉದ್ಘಾಟನೆ


ಮೂಡುಬಿದಿರೆ: ಮೂರು ದಿನಗಳ ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ವಿಚಾರಸಂಕಿರಣ 'ಪಿನಾಕಲ್ -2026'ರ ಬ್ಯಾನರ್ ಅನಾವರಣ ಮತ್ತು ಉದ್ಘಾಟನಾ ಸಮಾರಂಭವು ಮಂಗಳವಾರ ಮೂಡುಬಿದಿರೆಯ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆಯಿತು.

ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (AI & ML) ವಿಭಾಗದ ವಿದ್ಯಾರ್ಥಿ ವೇದಿಕೆಯಾದ 'ಯೆನ್ ಆಟ್೯ಫಿಸಲ್' ವತಿಯಿಂದ, ಐಇಇಇ ವಿದ್ಯಾರ್ಥಿ ಶಾಖೆ ಮತ್ತು ಐಎಸ್ ಟಿಇ  ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ಆಯೋಜಿಸಲಾದ ಪಿನಾಕಲ್-2026, ತಂತ್ರಜ್ಞಾನವು ನಾವೀನ್ಯತೆ, ಸೃಜನಶೀಲತೆ ಹಾಗೂ ಸಹಯೋಗಕ್ಕೆ ಮಹತ್ವದ ವೇದಿಕೆಯನ್ನು ಒದಗಿಸುತ್ತದೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಇಂಟ್ರಾನೈನ್ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯಾಚರಣಾಧಿಕಾರಿ (COO) ಮೊಹಮ್ಮದ್ ಶುಹೈಬ್, ಸಂಸ್ಥೆಯ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಮ್ ಕ್ಯಾಂಪಸ್ ಆಡಳಿತಾಧಿಕಾರಿಗಳು, ಶೈಕ್ಷಣಿಕ ಡೀನ್, ಮುಖ್ಯ ಕಾರ್ಯಕ್ರಮ ಸಂಯೋಜಕರು, ಬೋಧಕ ವರ್ಗದ ಸದಸ್ಯರು, ಕೈಗಾರಿಕಾ ಕ್ಷೇತ್ರದ ತಜ್ಞರು ಹಾಗೂ ವಿದ್ಯಾರ್ಥಿ ಸಂಘಟಕರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ವಿಚಾರಸಂಕಿರಣದ ಭಾಗವಾಗಿ 'ಅನ್ ಸ್ಕ್ರಾಂಬಲ್ 5.0' ಅಡಿಯಲ್ಲಿ ಪ್ರಾಜೆಕ್ಟ್ ಎಕ್ಸ್‌ಪೋ ಮತ್ತು ಟೆಕ್ ಫೆಸ್ಟ್ ಆಯೋಜಿಸಲಾಗಿದ್ದು, ಇದರ ನಂತರ  ನಡೆಯುವ 'QUORIA 2026'ಕೃತಕ ಬುದ್ಧಿಮತ್ತೆ ಶೃಂಗಸಭೆ (AI Summit) ನಡೆಯಲಿದ್ದು ಈ ಕಾರ್ಯಕ್ರಮಗಳು ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯ, ಸೃಜನಶೀಲ ಚಿಂತನೆ ಮತ್ತು ನವೀನ ಆಲೋಚನೆಗಳಿಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article