ನ.2 ರಂದು ಅಳಿಯೂರಿನಲ್ಲಿ ಪಟ್ಟದ ಕತ್ತಿ ಯಕ್ಷಗಾನ ಪ್ರದಶ೯ನ, ಸಾಧಕರಿಗೆ ಸನ್ಮಾನ
ಮೂಡುಬಿದಿರೆ: ನಾಟಕ ರಚನೆಗಾರ ಗಣೇಶ್ ಅಳಿಯೂರು ಸಂಚಾಲಕತ್ವದ ವಿದ್ಯಾಗಣಪತಿ ಕಲಾ ಪ್ರತಿಷ್ಠಾನ ಅಳಿಯೂರು ಇದರ ವಾರ್ಷಿಕೋತ್ಸವದ ಅಂಗವಾಗಿ ನ. 2ರಂದು ಅಳಿಯೂರಿನಲ್ಲಿ ಪಟ್ಟದ ಕತ್ತಿ ಯಕ್ಷಗಾನ ಪ್ರದಶ೯ನ, ಸಾಧಕರಿಗೆ ಸನ್ಮಾನ ಕಾಯ೯ಕ್ರಮ ನಡೆಯಲಿದೆ.
ಶ್ರೀ ಕಟೀಲೇಶ್ವರಿ ಕನ್ಸ್ ಸ್ಟ್ರಕ್ಸನ್ ನ ಮಾಲಕರಾದ ನಾಗೇಶ ಬಂಗೇರ ಅಧ್ಯಕ್ಷತೆಯಲ್ಲಿ ಸಂಜೆ 6.30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ವಕೀಲರಾದ ಮಯೂರ ಕೀರ್ತಿ ಅವರು ಉಧ್ಟಾಟಿಸಲಿದ್ದಾರೆ.
ತಂಡದ ಪ್ರೋತ್ಸಾಹಕ ಹಲವು ಯಶಸ್ವಿ ಸಮಾಜಮುಖಿ ಚಟುವಟಿಕೆಗಳ ಸರದಾರ ಚಾವಡಿಮನೆ ಜಗನಾಥ ಶೆಟ್ಟಿಯವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ, ಮೂಡುಬಿದಿರೆ ತಾಲೂಕು ಶಾಮಿಯಾನ ಸಮಿತಿ ಅಧ್ಯಕ್ಷರಾಗಿ ಅಯ್ಕೆಯಾಗಿರುವ ವಿ. ಎಸ್ ಅರೇಂಜರ್ಸ್ ನ ರಮಾನಾಥ ಸಾಲ್ಯಾನ್ ಅವರಿಗೆ ಗೌರವ ಅಭಿನಂದನೆ, ನಾಟಕ ತಂಡದ ಗೌರವ ಸಂಚಾಲಕಿ ಹೇಮಾವತಿ ಕೆ. ಕೆ ಪೂಜಾರಿ ಅವರಿಗೆ ಗೌರವ ಸನ್ಮಾನ, ನಾಟಕ ತಂಡದ ಪ್ರೋತ್ಸಾಹಕರಾದ ಕ್ರಿಯೆಟಿವ್ ಕಾಲೇಜ್ ಬೈಟ್ ಕಾಲೇಜ್ ಅಡ್ವೆಂಚರ್ ಕಾಲೇಜುಗಳ ಕಟ್ಟಡ ನಿರ್ವಾಣದ ಯಶಸ್ವಿ ಗುತ್ತಿಗೆದಾರ ಯು.ಕೆ ಕನ್ಸ್ ಸ್ಟ್ರಕ್ಷನ್ ನ ಇರ್ಫಾನ್, ಯುವ ಉಧ್ಯಮಿ ಮಹಾಲಕ್ಮೀ ಸತೀಶ್ ಪೂಜಾರಿ ಗುಂಡೂರಿ ವೇಣೂರು ಅವರಿಗೆ ಯುವ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ವಿದ್ಯಾಗಣಪತಿ ಕಲಾ ಪ್ರತಿಷ್ಠಾನದ ಕಲಾವಿದರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು ನಂತರ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಗಣೇಶ್ ಬಿ ಅಳಿಯೂರು ರಚನೆಯ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ ನಿರ್ದೇಶನದಲ್ಲಿ ಸರಪಾಡಿ, ಬಂಗಾಡಿ, ಚಂದ್ರಶೇಖರ ಧರ್ಮಸ್ಥಳ, ಅಶ್ವಥ್ ಕೈಕಂಬ ಸಹಿತ ದಿಗ್ಗಜ ಕಲಾವಿದರ ಅಭಿನಯದಲ್ಲಿ ಪಟ್ಟದ ಕತ್ತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.