ರಾಜ್ಯ ಮಟ್ಟದ ಎಲೆಕ್ಟ್ರಾನಿಕ್ಸ್ ಟೆಕ್ನಿಷಿಯನ್ ಗಳಿಗೆ 3 ದಿನದ ಆಂಡ್ರಾಯ್ಡ್, ಸ್ಮಾರ್ಟ್ ಟಿವಿಯ ಚಿಪ್ ಲೆವೆಲ್, ಸಾಫ್ಟ್ವೇರ್, ಪ್ಯಾನೆಲ್ ತರಬೇತಿ ಕಾರ್ಯಗಾರ

ರಾಜ್ಯ ಮಟ್ಟದ ಎಲೆಕ್ಟ್ರಾನಿಕ್ಸ್ ಟೆಕ್ನಿಷಿಯನ್ ಗಳಿಗೆ 3 ದಿನದ ಆಂಡ್ರಾಯ್ಡ್, ಸ್ಮಾರ್ಟ್ ಟಿವಿಯ ಚಿಪ್ ಲೆವೆಲ್, ಸಾಫ್ಟ್ವೇರ್, ಪ್ಯಾನೆಲ್ ತರಬೇತಿ ಕಾರ್ಯಗಾರ


ಮೂಡುಬಿದಿರೆ: ಮೂಡುಬಿದಿರೆ ತನ್ಮಯ್ ಟೆಕ್ನಾಲಜೀಸ್ ನೇತೃತ್ವದಲ್ಲಿ ತ್ರಿಭುವನ್ ಜೇಸಿ, ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ರಾಜ್ಯ ಮಟ್ಟದ ಎಲೆಕ್ಟ್ರಾನಿಕ್ಸ್ ಟೆಕ್ನಿಷಿಯನ್ ಗಳಿಗೆ 3 ದಿನದ ಆಂಡ್ರಾಯ್ಡ್, ಸ್ಮಾರ್ಟ್ ಟಿವಿಯ ಚಿಪ್ ಲೆವೆಲ್, ಸಾಫ್ಟ್ವೇರ್, ಪ್ಯಾನೆಲ್ ತರಬೇತಿ ಕಾರ್ಯಗಾರ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯಿತು.

ಮೂಡುಬಿದಿರೆ ವಂದೇಮಾತರಂ ಸೌಹಾರ್ದ ಸಹಕಾರಿಯ ಅಧ್ಯಕ್ಷ ವಾಸುದೇವ ಭಟ್ ದೀಪ ಬೆಳಗಿಸಿ ಉದ್ಘಾಟನೆ ಗೊಳಿಸಿದರು. ನಂತರ ಮಾತನಾಡಿ ತಾಂತ್ರಿಕ ಕೌಶಲ್ಯ ದಿಂದ ಹಲವಾರು ಉದ್ಯೋಗ ಸ್ರಷ್ಟಿ ಗೊಂಡಿದೆ. ಯುವಕರು ತಮ್ಮ ಕೌಶಲ್ಯವನ್ನು ಅಭಿವೃದ್ಧಿಗೊಳಿಸಿ ಸಮಾಜಕ್ಕೆ ಸೇವೆ ನೀಡುವುದರ ಮೂಲಕ ಸ್ವ ಉದ್ಯೋಗದಲ್ಲಿ ಅಭಿವೃದ್ಧಿ ಗೊಳ್ಳಲು ಅವಕಾಶ ಇದೆ ಎಂದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್, ಜೆಸಿಐ ಅಧ್ಯಕ್ಷ ಸುಧಾಕರ ಶೆಟ್ಟಿ, ಜೆಸಿಐ ಪೂರ್ವ ಅಧ್ಯಕ್ಷ ಶಾಂತಲಾ ಆಚಾರ್ಯ, ಉದ್ಯಮಿ ಸದಾಶಿವ ರಾವ್, ಜೇಸಿ ಪ್ರಮಯಿ ಮುಖ್ಯ ತರಬೇತಿದಾರ ಮತ್ತು ತನ್ಮಯ್ ಟೆಕ್ನಾಲಜಿಯ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article