37ನೇ ವರ್ಷದ ಮೂಡುಬಿದಿರೆ ಶ್ರೀ ಶಾರದಾ ಮಹೋತ್ಸವ ಸಂಪನ್ನ

37ನೇ ವರ್ಷದ ಮೂಡುಬಿದಿರೆ ಶ್ರೀ ಶಾರದಾ ಮಹೋತ್ಸವ ಸಂಪನ್ನ


ಮೂಡುಬಿದಿರೆ: ಮೂಡುಬಿದಿರೆ ಇಲ್ಲಿನ ಶ್ರೀ ವೀರ ಮಾರುತಿ ಸೇವಾ ಟ್ರಸ್ಟ್  ಆಶ್ರಯದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಸುಕ್ರತೀಂದ್ರ ಕಲಾಮಂದಿರದಲ್ಲಿ ಮೂರು ದಿನಗಳ ಕಾಲ ಜರುಗಿದ ಶ್ರೀ ಶಾರದಾ ಮಹೋತ್ಸವ ಮಂಗಳವಾರ ಸಂಪನ್ನಗೊಂಡಿತು. 

ಶ್ರೀ ದೇವರ ವಿಗ್ರಹವನ್ನು ಗುರುಪುರ ಸತ್ಯ ದೇವತಾ ಮಂದಿರದ ಚಂದ್ರಕಾಂತ ಭಟ್ ದಂಪತಿ ಪ್ರತಿಷ್ಠಾಪಿಸಿದರು. ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯನ್ನು ಪ್ರಾಯೋಜಕತ್ವ ವಹಿಸಿದ ಕೆನರಾ ಬ್ಯಾಂಕ್ ನ ಮೂಡುಬಿದಿರೆ ಶಾಖೆಯ ಶ್ರೀ ರಮಾನಂದರಾವ್ ಉದ್ಘಾಟಿಸಿದರು. 

ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್,  ಮಾಜಿ ಸಚಿವ ಅಭಯಚಂದ್ರ ಜೈನ್,  ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್ ಕೆಪಿಸಿಸಿ ಕಾರ್ಯದರ್ಶಿ, ಮಿಥುನ್ ರೈ   ಭಾಗವಹಿಸಿದ್ದರು. 

ಶಾಂತಿವನ ಟ್ರಸ್ಟ್ ನಿರ್ದೇಶಕ ಶಶಿಕಾಂತ್ ಜೈನ್, ಚಲನಚಿತ್ರ ನಟಿ ಶಾರದಾದೇವಿ ಸಂಯೋಜಕ ಶೇಖರ ಕಡ್ತಲ ಉಪಸ್ಥಿತರಿದ್ದರು. 

ವಲಯ ಮಟ್ಟದ ಚಿತ್ರಕಲಾ ಸ್ಪರ್ಧೆ ಭಕ್ತಿಗೀತೆ ಸ್ಪರ್ಧೆ ಮುದ್ದು ಶಾರದೆ ಸ್ಪರ್ಧೆಗಳ ವಿಜೇತರಿಗೆ ಉದ್ಯಮಿಗಳಾದ ಪ್ರಭಾ ಚಂದ್ರ ಜೈನ್ ರಾಜೇಂದ್ರ ಕುಮಾರ್ ಬಾಲಚಂದ್ರ ನಾಯಕ್ ಚಲನಚಿತ್ರ ಸಂಗೀತ ನಿರ್ದೇಶಕ ಪ್ರಮೋದ್ ಸಪ್ರೇ ಬಹುಮಾನ ವಿತರಿಸಿದರು. 

ಕಾರ್ಯಕ್ರಮದ ಸಂಯೋಜಕ ಪ್ರಸನ್ನ ವಿ.ಶೆಣೈ ಕಾಯ೯ಕ್ರಮ ನಿರೂಪಿಸಿದರು.  

ನಂತರ ಈ ದೇವರ ವಿಗ್ರಹವನ್ನು ವೈಭವದ ಶೋಭಾ ಯಾತ್ರೆಯೊಂದಿಗೆ ಆಟಗಾರು ಬಡಗು ಮಹಾಲಿಂಗೇಶ್ವರ ದೇವಾಲಯದ ಮಾನಸ ಸರೋವರದಲ್ಲಿ ಜಲ ಸ್ತಂಭನ ಗೊಳಿಸಲಾಯಿತು. 

ಟ್ರಸ್ಟ್ ನ ಎಲ್ಲಾ ಸದಸ್ಯರು ದೇವಳದ ಆಡಳಿತ ಮಂಡಳಿಯವರು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article