ಕಂಬಳ ಅಕಾಡೆಮಿಯ 7ನೇ ವಷ೯ದ ಶಿಬಿರದಲ್ಲಿ 42 ಮಂದಿಗೆ  ಓಟದ ತರಬೇತಿ: ಗುಣಪಾಲ ಕಡಂಬ

ಕಂಬಳ ಅಕಾಡೆಮಿಯ 7ನೇ ವಷ೯ದ ಶಿಬಿರದಲ್ಲಿ 42 ಮಂದಿಗೆ ಓಟದ ತರಬೇತಿ: ಗುಣಪಾಲ ಕಡಂಬ


ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆಯ ಸೃಷ್ಠಿ ಗಾಡ೯ನ್ ನಲ್ಲಿ ಕಂಬಳ ಸಂರಕ್ಷಣೆ ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ  ನಡೆದ 7ನೇ ವರ್ಷದ  ಕಂಬಳದ ಓಟಗಾರರ ತರಬೇತಿ ಶಿಬಿರದಲ್ಲಿ 42 ಮಂದಿ ಪಾಲ್ಗೊಂಡಿದ್ದಾರೆ ಎಂದು ಅಕಾಡಮಿಯ ಸಂಚಾಲಕ ಗುಣಪಾಲ ಕಡಂಬ ಹೇಳಿದರು. 


ಅವರು ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿ ಅವಿಭಜಿತ ದ.ಕ. ಜಿಲ್ಲೆಯಿಂದ ತರಬೇತಿಗೆ ಒಟ್ಟು 123 ಮಂದಿ ಅಭ್ಯರ್ಥಿಗಳು ಹೆಸರು ನೊಂದಾಯಿಸಿದ್ದು ಮೊದಲ ಹಂತದಲ್ಲಿ 72 ಮಂದಿಯನ್ನು ಹಾಗೂ ಅಂತಿಮ ಸುತ್ತಿನಲ್ಲಿ 42 ಮಂದಿಯನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ.  ಈ ಪೈಕಿ ಪೈಂಟಿಂಗ್ ವೃತ್ತಿಯವರು, ಜೆಸಿಬಿ ಆಪರೇಟರ್‌ಗಳು, ಡ್ರೈವರ್‌ಗಳು, ವಿದ್ಯಾರ್ಥಿಗಳು, ಎಸ್ ಎಸ್ ಎಲ್ ಸಿ ಯಿಂದ ಸ್ಯಾತಕೋತ್ತರ ಪದವೀಧರರೂ ಸೇರಿದ್ದಾರೆ. ಶಿಬಿರದಲ್ಲಿ ಮನಶಾಸ್ತ್ರ ತಜ್ಞರಿಂದ ಮಾಹಿತಿ, ವ್ಯಕ್ತತ್ವ ರೂಪಿಸುವುದು, ಆರೋಗ್ಯದ ಬಗ್ಗೆ ಮಾಹಿತಿ, ಕಂಬಳದಲ್ಲಿರುವ ಧಾರ್ಮಿಕ ನಂಬಿಕೆಗಳ ಬಗ್ಗೆ ಮನದಟ್ಟು ಮಾಡಲಾಗಿದೆ. ಹಿಂದಿನ ಕಂಬಳ ತರಬೇತಿಯಲ್ಲಿ ತರಬೇತಿ ಪಡೆದವರು, ಕಂಬಳ ಓಟಗಾರರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಅ.8 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ 7ನೇ ವಷ೯ದ ಶಿಬಿರಾಥಿ೯ಗಳಿಗಾಗಿ ನಡೆಯುವ ಪ್ರಾಯೋಗಿಕ ಕಂಬಳವು ನಡೆಯಲಿದ್ದು, ಇದೇ ಸಂದರ್ಭದಲ್ಲಿ ಕಂಬಳ ಅಕಾಡೆಮಿಯ ಪ್ರಶಸ್ತಿ ಪ್ರದಾನ ನಡೆಯಲಿದ್ದು ತರಬೇತಿ ಪಡೆದವರಿಗೆ ಅಕಾಡಮಿಯಿಂದ ಪ್ರಮಾಣ ಪತ್ರ ನೀಡಲಾಗುವುದು. ಕಲಿಕೆಯ ದೃಷ್ಠಿಯಿಂದ ತರಬೇತಿ ಪಡೆದ ಎಲ್ಲರನ್ನು ಮೈಸೂರು ದಸರಾ ಕಂಬಳಕ್ಕೆ ಪರಿಚಾರಕರಾಗಿ ಕಳುಹಿಸಲಾಗುವುದು ಎಂದರು. 

ಈ ಸಂದಭ೯ದಲ್ಲಿ ಈದು ಜ್ವಾಲಾಪ್ರಸಾದ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article