'72ನೇ ವನ್ಯಜೀವಿ ಸಪ್ತಾಹ-2026'-ಪ್ರಕೃತಿಯ ಜೊತೆಗೆ ಕಾಡುಪ್ರಾಣಿಗಳನ್ನು ಉಳಿಸುವುದು ನಮ್ಮೆಲ್ಲರ ಹಕ್ಕು: ಆಕಾಶ್ ಧನಾಜಿ

'72ನೇ ವನ್ಯಜೀವಿ ಸಪ್ತಾಹ-2026'-ಪ್ರಕೃತಿಯ ಜೊತೆಗೆ ಕಾಡುಪ್ರಾಣಿಗಳನ್ನು ಉಳಿಸುವುದು ನಮ್ಮೆಲ್ಲರ ಹಕ್ಕು: ಆಕಾಶ್ ಧನಾಜಿ


ಮೂಡುಬಿದಿರೆ: ಪ್ರಕೃತಿಯು ನಮ್ಮೆಲ್ಲರನ್ನು ಒಂದೇ ರೀತಿಯಾಗಿ ಸೃಷ್ಟಿಸಿದೆ. ಮನುಷ್ಯರಂತೆಯೇ ಪ್ರಾಣಿಗಳಿಗೂ ಈ ಭೂಮಿಯ ಮೇಲೆ ಬದುಕುವ ಹಕ್ಕು ಇದೆ ಆದ್ದರಿಂದ ಪ್ರಕೃತಿಯ ಜೊತೆಗೆ ಕಾಡು ಪ್ರಾಣಿಗಳನ್ನು ಉಳಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಕತ೯ವ್ಯ ಎಂದು ಮೂಡುಬಿದಿರೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಕಾಶ್ ಧನಾಜಿ ಕದಮ್ ಹೇಳಿದರು.


ಅವರು ಅರಣ್ಯ ಇಲಾಖೆ ಕುಂದಾಪುರ ವಿಭಾಗ, ಮೂಡುಬಿದಿರೆ ಉಪವಿಭಾಗ ಮೂಡುಬಿದಿರೆ ವಲಯ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ನಡೆದ '72 ನೇ ವನ್ಯಜೀವಿ ಸಪ್ತಾಹ-2026' ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 


ಪ್ರಾಣಿಗಳು ಕಾಡಿನಿಂದ ಹೊರಗೆ ಬಂದು ಹಳ್ಳಿಗಳಿಗೆ ಬರುತ್ತಿವೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ ಆದರೆ ಹಾಗಿಲ್ಲ ನಾವೇ ಅವುಗಳ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದೇವೆ. ನಮ್ಮ ಯಾವುದೇ ಯೋಜನೆ, ಅಭಿವೃದ್ಧಿ ಅಥವಾ ಜೀವನಶೈಲಿಯಲ್ಲಿ ಪರಿಸರ ಮತ್ತು ಪ್ರಕೃತಿಯ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಾಗಿದೆ ಎಂದ ಅವರು ಪ್ರಕೃತಿಯ ಮೇಲಿನ  ಪ್ರೀತಿಗೆ ಇತ್ತೀಚಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಆದ್ದರಿಂದ ನೀವು ವಿದ್ಯಾಥಿ೯ಗಳು ನಿಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿ  ಎಂದರು.

ದ.ಕ. ಹಾಲು ಉತ್ಪಾದಕರ ಒಕ್ಕೂಟದ ನಿದೇ೯ಶಕ ಕೆ.ಪಿ. ಸುಚರಿತ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪ್ರಕೃತಿಯನ್ನು ಉಳಿಸುವುದು ಮತ್ತು ನೆಲ, ಜಲವನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ. ಪ್ರಕೃತಿಯನ್ನು ಪ್ರೀತಿಸಿದರೆ ಭವಿಷ್ಯದಲ್ಲಿ ಸಮೃದ್ಧವಾದ ಭಾರತವನ್ನು ನೋಡಲು ಸಾಧ್ಯ ಎಂದರು.

 ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್,  ಬಳುವಾಯಿ ಬಟರ್ ಫ್ಲೈಯ್ ಪಾಕ್೯ನ ಸಮ್ಮಿಲನ್ ಶೆಟ್ಟಿ, ಪರಿಸರ ಪ್ರೇಮಿ ವಿನೀಶ್ ಪೂಜಾರಿ ನಿಡ್ಡೋಡಿ ಉಪಸ್ಥಿತರಿದ್ದರು.

ಉಪವಲಯಾರಣ್ಯಾಧಿಕಾರಿ ರಾಘವೇಂದ್ರ ಸ್ವಾಗತಿಸಿದರು. ವಲಯಾರಣ್ಯಾಧಿಕಾರಿ ಕಿರಣ್ ಕುಮಾರ್ ಜಿ. ಪ್ರಾಸ್ತಾವಿಕವಾಗಾ ಮಾತನಾಡಿ ಕಾಯ೯ಕ್ರಮದ ಉದ್ದೇಶವನ್ನು ತಿಳಿಸಿದರು. ವಿದ್ಯಾಥಿ೯ನಿ ಪ್ರತ್ವಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article