ಆಫ್ಕೊ ಫೂಟ್ ವೇರ್ ಮಾಲಕ ಅಬೂಬಕ್ಕರ್ ನಿಧನ
Thursday, October 1, 2026
ಮೂಡುಬಿದಿರೆ: ಇಲ್ಲಿನ ಆಫ್ಕೊ ಫೂಟ್ ವೇರ್ ಮಾಲಕ, ಬಿಲ್ಡರ್ ಅಬೂಬಕ್ಕರ್ (76) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾದರು.
ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸರ್ವರೊಂದಿಗೂ ಬೆರೆಯುತ್ತಿದ್ದ ಅವರು ಮೂಡುಬಿದಿರೆ ಪರಿಸರದಲ್ಲಿ 'ಅಬೊಕ್ಕರಾಕ' ಎಂದೇ ಖ್ಯಾತರಾಗಿದ್ದರು.
ಲಾಡಿ ಶಾಲಿಮಾರ್ ಬಳಿಯ ನಿವಾಸಿಯಾಗಿದ್ದ ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.