ಬಿಜೆಪಿ ಮೂಡುಬಿದಿರೆ ಮಂಡಲದ ಹಿಂದುಳಿದ ವಗ೯ಗಳ ಮೋಚಾ೯ದಿಂದ ಸ್ವಚ್ಛತಾ ಕಾಯ೯ಕ್ರಮ

ಬಿಜೆಪಿ ಮೂಡುಬಿದಿರೆ ಮಂಡಲದ ಹಿಂದುಳಿದ ವಗ೯ಗಳ ಮೋಚಾ೯ದಿಂದ ಸ್ವಚ್ಛತಾ ಕಾಯ೯ಕ್ರಮ


ಮೂಡುಬಿದಿರೆ: ಸ್ವಚ್ಛತಾ ಸೇವಾ ಸಂಕಲ್ಪದಂಗವಾಗಿ ಭಾರತೀಯ ಜನತಾ ಪಾಟಿ೯ ಮೂಡುಬಿದಿರೆ ಮಂಡಲದ ಹಿಂದುಳಿದ ವಗ೯ಗಳ ಮೋಚಾ೯ದ ವತಿಯಿಂದ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತಾ ಕಾಯ೯ಕ್ರಮವನ್ನು ಹಳೆಯಂಗಡಿ ಮಹಾಶಕ್ತಿ ಕೇಂದ್ರದ ತೋಕೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹಿಂದೂಸ್ಥಾನಿ ಶಾಲೆಯ ವಠಾರದಲ್ಲಿ ನಡೆಸಲಾಯಿತು.

ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ  ಭಾವಚಿತ್ರಗಳಿಗೆ ಪುಷ್ಪಾಚ೯ನೆ ಮಾಡುವ ಮೂಲಕ ಜನ್ಮದಿನವನ್ನು ಆಚರಿಸಲಾಯಿತು. 

ದೇಶದ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬ ಮತ್ತು 25 ವಷ೯ಗಳ ಸುಧೀಘ೯ ಅವಧಿಯ ರಾಷ್ಟ್ರ ಸೇವೆಯ ಅಂಗವಾಗಿ ನಡೆಯುತ್ತಿರುವ ಸೇವಾ ಸಂಕಲ್ಪ ಕಾಯ೯ಕ್ರಮದಡಿಯಲ್ಲಿ ಸ್ವಚ್ಛತಾ ಕಾಯ೯ಕ್ರಮವನ್ನು ಆಯೋಜಿಸಿದ್ದು ಹಿಂದುಳಿದ ವಗ೯ಗಳ ಮಂಡಲ ಅಧ್ಯಕ್ಷ ಪ್ರದೀಪ್ ಕುಮಾರ್ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು. 

ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್ ಕಾಯ೯ಕ್ರಮಕ್ಕೆ ಶುಭ ಹಾರೈಸಿದರು.

ಮಂಡಲದ ಉಪಾಧ್ಯಕ್ಷ ವಿನೋದ್ ಬೊಳ್ಳೂರು, ಹಳೆಯಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ್ ಸಾಲ್ಯಾನ್, ಮೋಚಾ೯ದ ಮಂಡಲದ ಪ್ರಭಾರಿಗಳಾದ ಪ್ರಭಾಕರ್ ಕುಲಾಲ್, ಪ್ರಧಾನ ಕಾಯ೯ದಶಿ೯ ಸಂಪತ್ ನೆತ್ತೋಡಿ ಹೇಮನಾಥ್ ಅಮೀನ್, ಸದಸ್ಯರಾದ ಪ್ರವೀಣ್ ಕೋಟ್ಯಾನ್, ವಿನೋದ್ ಕುಮಾರ್, ಶಕ್ತಿ ಕೇಂದ್ರದ ಪ್ರಮುಖ್ ಲೋಹಿತ್ ಕೋಟ್ಯಾನ್, ಬೂತ್ ಅಧ್ಯಕ್ಷರು, ಕಾಯ೯ದಶಿ೯, ಪಂಚಾಯತ್ ನ ಮಾಜಿ ಸದಸ್ಯರು, ಕಾಯ೯ಕತ೯ರು ಈ ಸಂದಭ೯ದಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article