ತೋಡಾರ್ ಉರೂಸ್: ಪೋಸ್ಟರ್ ಬಿಡುಗಡೆ
Friday, October 16, 2026
ಮೂಡುಬಿದಿರೆ: ಜನವರಿ 8 ರಿಂದ 16 ರ ವರೆಗೆ ನಡೆಯಲಿರುವ ತೋಡಾರು ಸಯ್ಯಿದ್ ( ಖ.ಸಿ.)ವಲಿಯುಲ್ಲಾಹಿ ದರ್ಗಾ ಶರೀಫ್ ನ ಉರೂಸ್ ಸಮಾರಂಭದ ಪೋಸ್ಟರ್ ಬಿಡುಗಡೆ ಸಮಾರಂಭವು ಶುಕ್ರವಾರ ಜುಮ್ಮಾ ನಮಾಝ್ ಬಳಿಕ ನಡೆಯಿತು.
ತೋಡಾರು ಮಸೀದಿಯ ಖತೀಬರಾದ ಮೂಸಾ ದಾರಿಮಿ ಅವರು ಪೋಸ್ಟರ್ ಬಿಡುಗಡೆಗೊಳಿಸಿ ದುವಾ ನೆರವೇರಿಸಿದರು.
ಉರೂಸ್ ಸಮಿತಿಯ ಅಧ್ಯಕ್ಷ ಎಂ.ಎ.ರಝಾಕ್, ಮಸೀದಿ ಕಮಿಟಿಯ ಅಧ್ಯಕ್ಷ ಡಿ.ಎ.ಉಸ್ಮಾನ್, ಎಂ.ಜಿ.ಮುಹಮ್ಮದ್, ರಫೀಕ್ ಹಾಜಿ,ಜಮಾತ್ ಹಾಗೂ ಉರೂಸ್ ಕಮಿಟಿಯ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.