ಮೂಡುಬಿದಿರೆಯಲ್ಲಿ ಸಮಾಜ ಮಂದಿರ ದಸರಾ ಗೌರವ
ಶಿಕ್ಷಣ ತಜ್ಞರು ಮತ್ತು ಶಿಕ್ಷಣದ ಉದ್ಯಮ ನಡುವಿನ ತಿಳಿಯದೇ ಶಿಕ್ಷಣ ರಂಗದ ಉದ್ಧಾರ ಸಾಧ್ಯವಿಲ್ಲ ಎಂದ ಅವರು ನಮಗೆ ನೀರಿನಲ್ಲಿ ಈಜಾಡುವವರಿಗಿಂತ ಆಳಕ್ಕಿಳಿದು ಮುತ್ತು ಹೆಕ್ಕಿ ತರುವ ವ್ಯವಸ್ಥೆ ಬೇಕಾಗಿದೆ. ಜಗತ್ತನ್ನು ತೆರೆದ ಕಣ್ಣುಗಳಿಂದ ನೋಡುವ, ಕೇಳುವ, ಪಡೆದಿರುವುದನ್ನು ಮಥಿಸಿ ಅನುಸಂಧಾನಿಸುವ ಬದಲಾವಣೆ ಶಿಕ್ಷಣದಲ್ಲಿ ಬರಬೇಕಾಗಿದೆ ಎಂದವರು ಅಭಿಪ್ರಾಯಪಟ್ಟರು.
ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಡಾ. ಆಶೀರ್ವಾದ್ ಎಂ. ಪಿ. ಮಾತನಾಡಿ, ಸಂಸ್ಕೃತಿಯ ಸಂಭ್ರಮ ದೈರ್ಯದಿಂದ ಸವಾಲುಗಳನ್ನೆದುರಿಸುವ, ಪ್ರಾಮಾಣಿಕ ಪರಿಶ್ರಮದಿಂದ ಸಮೃದ್ಧಿಯ ಗಳಿಕೆ ಜ್ಞಾನ ಮತ್ತು ವಿವೇಕದಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನವರಾತ್ರಿಯ ಶಕ್ತಿದೇವತೆಗಳ ಸಂದೇಶವಾಗಿದೆ ಎಂದವರು ಹೇಳಿದರು.
ಸಮಾಜ ಮಂದಿರ ಗೌರವ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂಡುಬಿದಿರೆಯ ಅಣ್ಣಿ ಸುವರ್ಣ (ವಾದ್ಯ ಕಲೆ), ಬೆದ್ರ ತುಳುಕೂಟದ ಅಧ್ಯಕ್ಷೆ ಜಯಂತಿ ಎಸ್. ಬಂಗೇರ (ಸಾಹಿತ್ಯ ಕ್ಷೇತ್ರ), ರೇಮಂಡ್ ತಾಕೋಡೆ (ಮಾಧ್ಯಮ, ಸಾಹಿತ್ಯ), ಪಾಂಡುರಾಜ್ ಅವರಿಗೆ (ಗೃಹರಕ್ಷಕ ದಳ) ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಗಾಗಿ ಸಮಾಜ ಮಂದಿರ ಗೌರವ ನೀಡಲಾಯಿತು.
ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸಮ್ಮಾನಿತರ ಕುರಿತು ಅಭಿನಂದನಾ ಮಾತುಗಳನ್ನಾಡಿದರು.
ದಸರಾ ಉತ್ಸವ ಸಂಚಾಲಕ ಗಣೇಶ್ ಕಾಮತ್ ಸಮ್ಮಾನಿತರನ್ನು ಪರಿಚಯಿಸಿದರು. ಸದಸ್ಯ ಕೆ. ವೆಂಕಟೇಶ್ ಕಾಮತ್ ಸ್ವಾಗತಿಸಿದರು. ಕಾರ್ಯದರ್ಶಿ ಹೆಚ್. ಸುರೇಶ್ ಪ್ರಭು ವಂದಿಸಿದರು.
ರಂಗ ಕರ್ಮಿ ಧನಂಜಯ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಾಟ್ಯ ವಿದುಷಿ ಶ್ರೀಮತಿ ಸುಖದಾ ಬರ್ವೆ ಅವರ ಶಿಷ್ಯವರ್ಗದಿಂದ ನೃತ್ಯ ಸಿಂಚನ ಕಾರ್ಯಕ್ರಮ ಜರಗಿತು.