ಯುವಶಕ್ತಿ, ತಂತ್ರಜ್ಞಾನ ಮತ್ತು ಸೇವಾ ಮನೋಭಾವ ದೇಶದ ಭವಿಷ್ಯ ರೂಪಿಸಲಿ: ವಿವೇಕ ಆಳ್ವ
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಯುವ ಕಾರ್ಯಕ್ರಮಗಳ ಸಹಾಯಕ ನಿರ್ದೇಶಕ ಅನಲೇಂದರ್ ಶರ್ಮಾ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶದ ಯುವಜನತೆಗೆ ಸದಾ ಆದರ್ಶ ಪ್ರಾಯರು. ದೇಶದ ಪ್ರತಿಯೊಬ್ಬ ಯುವಕ-ಯುವತಿಯೂ ಸ್ಕೌಟಿಂಗ್‌ನ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಮಹತ್ವದ ಬದಲಾವಣೆ ಸಾಧ್ಯ. ಸೇವೆ, ಶಿಸ್ತು, ನಾಯಕತ್ವ ಹಾಗೂ ದೇಶಪ್ರೇಮದಂತಹ ಮೌಲ್ಯಗಳನ್ನು ಬೆಳೆಸುವಲ್ಲಿ ಸ್ಕೌಟಿಂಗ್ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ರೋಬೋಟಿಕ್ಸ್, ಎಐ ಮತ್ತು ಸ್ಟೆಮ್ ಕ್ಷೇತ್ರಗಳೊಂದಿಗೆ ಯುವ ಉದ್ಯಮಶೀಲತೆಯನ್ನು ಜೋಡಿಸಿರುವ ಈ ಕಾರ್ಯಾಗಾರವು ಕುತೂಹಲ, ಹೊಸ ಆಲೋಚನೆ ಹಾಗೂ ಆವಿಷ್ಕಾರದ ಮನೋಭಾವವನ್ನು ಬೆಳೆಸುವ ವೇದಿಕೆಯಾಗಬೇಕು. ಪ್ರಶ್ನೆಗಳನ್ನು ಕೇಳುವುದು, ಪ್ರಯೋಗ ನಡೆಸುವುದು, ತಂತ್ರಜ್ಞಾನವನ್ನು ವಿವೇಚನೆಯಿಂದ ಬಳಸುವುದು ಮತ್ತು ಕಲಿತದ್ದನ್ನು ಕಾರ್ಯರೂಪಕ್ಕೆ ತರುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ ಎಂದರು.
ಕಾರ್ಯಾಗಾರದಲ್ಲಿ ಮಾತನಾಡಿದ ಅಪ್ಲೈಡ್ ಸಿಸ್ಟಮ್ಸ್ನ ಉತ್ಪನ್ನ ವಿತರಣೆ ಮತ್ತು ಸೇವೆಗಳ ಉಪಾಧ್ಯಕ್ಷ ವೆಂಕಟೇಶ್ ಸಂಗನಾಳ್, ಅಗತ್ಯವಿರುವವರಿಗೆ ನೆರವಾಗುವುದು, ಸಮಾಜಕ್ಕೆ ಸೇವೆ ಸಲ್ಲಿಸುವುದು ಹಾಗೂ ಪರಿಸರವನ್ನು ಸಂರಕ್ಷಿಸುವುದು ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯ ಪ್ರಮುಖ ಆಶಯಗಳಾಗಿವೆ ಎಂದರು.
ಜಿಲ್ಲಾ ಗೈಡ್ ಕಮಿಷನರ್ ವಿಮಲಾ ರಂಗಯ್ಯ, ಕಾರ್ಯಾಗಾರವು ಯುವಕರ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿದ್ದು, ಇಲ್ಲಿ ಪಡೆಯುವ ಅನುಭವವನ್ನು ಮುಂದಿನ ಶೈಕ್ಷಣಿಕ ಮತ್ತು ವೃತ್ತಿ ಬದುಕಿನಲ್ಲಿ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ಹರೀಶ್ ಕುಂದರ್, ಯೋಗೇಂದ್ರ, ವೇಣುರಾವ್ ದೇವ್, ಚಂದ್ರ, ಸೃಜಿತ್ ಶ್ರೀನಾಥ್, ಸಂಧ್ಯಾ, ಭರತ್‌ರಾಜ್ ಸೇರಿದಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿವಿಧ ವಿಭಾಗಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಭಾರತದ ಎಲ್ಲಾ ರಾಜ್ಯಗಳಿಂದ ಒಟ್ಟು 161 ಶಿಬಿರಾರ್ಥಿಗಳು ಕರ‍್ಯಕ್ರಮದಲ್ಲಿ ಪಾಲ್ಗೊಂಡರು.
ಅಪೇಕ್ಷಾ ಭಂಡಾರಿ ಕರ‍್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ನವೀನ್ ಅಂಬೂರಿ ವಂದಿಸಿದರು.

