ರಾಜ್ಯ ಸರ್ಕಾರದ ಜನ ವಿರೋಧಿ ನೀತಿ: ಬಿಜೆಪಿಯಿಂದ ಬೆಳುವಾಯಿಯಲ್ಲಿ ಪ್ರತಿಭಟನೆ

ರಾಜ್ಯ ಸರ್ಕಾರದ ಜನ ವಿರೋಧಿ ನೀತಿ: ಬಿಜೆಪಿಯಿಂದ ಬೆಳುವಾಯಿಯಲ್ಲಿ ಪ್ರತಿಭಟನೆ


ಮೂಡುಬಿದಿರೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಆಡಳಿತಕ್ಕೆ ಸೌಲಭ್ಯ, ಅನುದಾನಗಳನ್ನು ನೀಡದೆ ಜನರನ್ನು ಅಲೆದಾಡುವ ಪರಿಸ್ಥಿತಿ ನಿರ್ಮಿಸಿರುವುದನ್ನು ಖಂಡಿಸಿ  ಬಿಜೆಪಿ ಬೆಳುವಾಯಿ ಶಕ್ತಿ ಕೇಂದ್ರದ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.


‘ನಮ್ಮ ಹಕ್ಕು ನಮಗೆ ನೀಡಿ’ ಎಂಬ ಘೋಷಣೆಯೊಂದಿಗೆ ಶಿರ್ತಾಡಿ ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ರಾಜ್ಯ ಸರ್ಕಾರದ ಧೋರಣೆಯನ್ನು ವಿರೋಧಿಸಿದರು.


ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನೀಲ್ ಆಳ್ವ, ಎಸ್.ಸಿ. ಮೋಚಾ೯ದ ಜಿಲ್ಲಾ ಅಧ್ಯಕ್ಷ ಜಗನ್ನಾಥ್ ಕಾನಾ ಪ್ರತಿಭಟನೆಯ ಪ್ರಮುಖ್ ಈಶ್ವರ್ ಕಟೀಲ್, ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್,   ಪ್ರಧಾನ ಕಾರ್ಯದರ್ಶಿಗಳಾದ ಹರಿಪ್ರಸಾದ್ ಮತ್ತು ರಂಜಿತ್ ಪೂಜಾರಿ, ಬೆಳುವಾಯಿ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಭಾಸ್ಕರ್ ಆಚಾರ್ಯ, ಸೋಮನಾಥ್ ಕೋಟ್ಯಾನ್, ಸುಶೀಲ, ಸದಸ್ಯರಾದ ಭರತ್ ಶೆಟ್ಟಿ, ರಘು ಪೆಲಕುಂಜ, ರವೀಂದ್ರ, ಸಂತೋಷ್,  ಕೆಸರ್ ಗದ್ದೆ ಶಕ್ತಿ ಕೇಂದ್ರದ ಪ್ರಮುಖ್ ವಂದನಾ ಪ್ರಭು ಹಾಗೂ ಬೆಳುವಾಯಿ ಶಕ್ತಿ ಕೇಂದ್ರದ ಪ್ರಮುಖ್ ರೋಷನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಬೆಳುವಾಯಿ ಪೇಟೆಯಿಂದ ಬೆಳುವಾಯಿ ಗ್ರಾಮ ಪಂಚಾಯಿತಿವರೆಗೆ ಪ್ರತಿಭಟನಾ ಜಾಥಾ ನಡೆಯಿತು.

 ಬಳಿಕ ಪಿಡಿಒಗೆ ಮನವಿ ಸಲ್ಲಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article