ಕೋಟೆಬಾಗಿಲಿನಲ್ಲಿ ಸ್ಕೂಟಿ ಸ್ಕಿಡ್: ಯುವಕ ಸಾವು

ಕೋಟೆಬಾಗಿಲಿನಲ್ಲಿ ಸ್ಕೂಟಿ ಸ್ಕಿಡ್: ಯುವಕ ಸಾವು


ಮೂಡುಬಿದಿರೆ: ಸ್ಕೂಟಿಯೊಂದು ಸ್ಕಿಡ್ ಆದ ಪರಿಣಾಮ ಯುವಕನೋವ೯ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ಬಳಿಯ ತಿರುವಿನಲ್ಲಿ ಬುಧವಾರ ಸಂಜೆ ನಡೆಡಿದೆ.


ಕೋಟೆ ಬಾಗಿಲು ಬಳಿಯ ನಿವಾಸಿ ಸುಧಾಕರ ಹೆಗ್ಡೆ ಅವರ ಪುತ್ರ ಪ್ರಶ್ವಿತ್ ಹೆಗ್ಡೆ (17) ಮೃತಪಟ್ಟ ಯುವಕ. 

ಶಿತಾ೯ಡಿ ಕಡೆಯಿಂದ ಕೋಟೆಬಾಗಿಲು ಕಡೆಗೆ ಪ್ರಶ್ವಿತ್ ಹೆಗ್ಡೆ ಮತ್ತು ದೀಕ್ಷಿತ್ ಹೆಗ್ಡೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಘಟನೆ ಸಂಭವಿಸಿದ್ದು ಪ್ರಶ್ವಿತ್ ಅವರ ತಲೆಗೆ ತೀವೃ ತರದ ಏಟಾಗಿತ್ತು ಎನ್ನಲಾಗಿದೆ. ದೀಕ್ಷಿತ್ ತಲೆಗೂ ಗಾಯಗಳಾಗಿದ್ದು ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪ್ರಶ್ವಿತ್ ಮೃತಪಟ್ಟಿದ್ದಾನೆ. 

ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article