ಆದಿದ್ರಾವಿಡ ಸಮುದಾಯದ ಕುಲಶಾಸ್ತ್ರೀಯ ಅದ್ಯಯನ ಮತ್ತು ಅಲೇರಿ ಮೂಲಕ್ಷೇತ್ರ ಅಭಿವೃದ್ಧಿಗೆ ಅನುದಾನ ನೀಡಲು ಬದ್ಧ: ಸಚಿವ ಕೆ. ಹೆಚ್ ಮುನಿಯಪ್ಪ
ಕುಲಶಾಸ್ತ್ರೀಯ ಅದ್ಯಯನ: ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಸೂಕ್ತ ಅನುದಾನ ಬಿಡುಗಡೆಯೊಂದಿಗೆ ಡಾ.ಬಿ.ಆರ್ ಅಂಬೇಡ್ಕರ್ ಸಂಶೋಧನಾ ಕೇಂದ್ರದ ಮೂಲಕ ಕುಲಶಾಸ್ತ್ರೀಯ ಅದ್ಯಯನ ನಡೆಸಲಾಗುವುದು ಎಂದರು.
ಡಿಸಿ ಮನ್ನಾ ಜಮೀನು ಹಂಚಿಕೆಗೆ ಜಿಲ್ಲಾಧಿಕಾರಿಗೆ ಆದೇಶ: ಡಿಸಿ ಮನ್ನಾ ಜಮೀನು ಬಗ್ಗೆ ಮೂರುವರೆ ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ. ಈ ಜಮೀನು ಹಂಚಿಕೆ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲೂ ವಾಗ್ದಾನ ಮಾಡಲಾಗಿದೆ ಎಂದು ನಾಯಕರು ಸಚಿವರ ಗಮನ ಸೆಳೆದಾಗ ಡಿಸಿ ಮನ್ನಾ ಜಮೀನು ಹಂಚಿಕೆ ಮಾಡುವ ಬಗ್ಗೆ ತಕ್ಷಣ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಆದೇಶಿಸುವುದಾಗಿದೆ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ಅಂಬೇಡ್ಕರ್ ಅದ್ಯಯನ ಕೇಂದ್ರ: ಅಲೇರಿ ಮೂಲಕ್ಷೇತ್ರದಲ್ಲಿ ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಚಟುವಟಿಕೆಗಳನ್ನು ಒಳಗೊಳ್ಳುವ ಅಗತ್ಯವಿದೆ ಎಂದ ಸಚಿವರು ಅಲೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅದ್ಯಯನ ಕೇಂದ್ರ ಸ್ಥಾಪಿಸಲು ಸೂಕ್ತ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ , ಮಿಥುನ್ ರೈ , ಸುಳ್ಯದ ಕಾಂಗ್ರೆಸ್ ಮುಖಂಡ ಜಿ. ಕೃಷ್ಣಪ್ಪ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್ ಮೂಡಬಿದಿರೆ , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ , ದ.ಕ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ , ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ನೀಲಯ್ಯ ಗಾಳಿಗುಡ್ಡೆ , ಗೌರವಾಧ್ಯಕ್ಷ ಸುರೇಶ್ ಹಾರ್ಡಿಕೊಪ್ಪ , ರಾಜ್ಯ ಉಪಾಧ್ಯಕ್ಷ ಕೃಷ್ಣಪ್ಪ ಜಾವಳಿ , ಮುಖಂಡರಾದ ಚಂದ್ರಪ್ಪ ಮದ್ದಡ್ಕ , ಶೇಖರ್ ವಿ ಧರ್ಮಸ್ಥಳ , ಮಾಧವ ಕಡೆಶಿವಾಲಯ , ಆನಂದ ಹಟ್ಟತ್ತೊಡಿ , ಲಿಂಗಪ್ಪ ಕೈಲಾರ್ ಕಾವಳಕಟ್ಟೆ ಶ್ರೀನಿವಾಸ್ ಪಾಲ್ಯ , ಶಿವರಾಮ ಆನಡ್ಕ , ಗಣೇಶ್ ಬೆಳುವಾಯಿ , ಶಿವಾನಂದ ಪಡಂಗಡಿ , ಯತೀಶ್ ಧರ್ಮಸ್ಥಳ , ಸುಕೇಶ್ ಮಾಲಾಡಿ , ಓಬಯ್ಯ ಆರಂಬೋಡಿ , ಮೋಹಿತ್ ಹಿರೆಬೈಲು, ಸುರೇಶ್ ಧರ್ಮಸ್ಥಳ, ಸುರೇಶ್ ಕಜೆಕಾರು, ಶೇಖರ್ ಲಾಯಿಲ ಮೊದಲಾದವರು ಉಪಸ್ಥಿತರಿದ್ದರು.
