ಸಾವಿರ ಕಂಬದ ಬಸದಿಗೆ ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಉಷಾರಾಣಿ ಭೇಟಿ: ಜೈನ ಸಮಾಜದಿಂದ ಗೌರವ
Tuesday, October 20, 2026
ಮೂಡುಬಿದಿರೆ: ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಉಷಾರಾಣಿ ಅವರು ಜೈನ ಕಾಶಿ ಮೂಡುಬಿದಿರೆಯ ತ್ರಿಭುವನ ತಿಲಕ ಚೂಡಾಮಣಿ ಬಸದಿಗೆ ಮಂಗಳವಾರ ಭೇಟಿ ನೀಡಿ ಪೂಜೆಯಲ್ಲಿ ಭಾಗವಹಿಸಿದರು.
ಬಳಿಕ ಭೈರಾದೇವಿ ಮಂಟಪದಲ್ಲಿ ಮೂಡುಬಿದಿರೆ ಜೈನ ಸಮಾಜದ ವತಿಯಿಂದ ನ್ಯಾಯಮೂರ್ತಿ ಉಷಾರಾಣಿ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಟ್ನ ಶೆಟ್ಟಿ, ಬಸದಿಗಳ ಮೊಕ್ತೇಸರರಾದ ಸುಧೀಶ್ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್ ಎಂ., ಸಂಪತ್ ಸಾಮ್ರಾಜ್ಯ, ರಾಜವರ್ಮ ಬೈಲಂಗಡಿ, ಡಾ. ಮಹಾವೀರ್ ಜೈನ್, ದಿವಿಜೇಂದ್ರ ಕುಮಾರ್, ಶ್ರಯಂಶ ಹೆಗಡೆ, ಶಶಿಕಾಂತ್ ವೈ., ಪೂರ್ಣಚಂದ್ರ ಜೈನ್, ನಿತೇಶ್ ಕುಮಾರ್, ವಿತೇಶ್ ಕುಮಾರ್, ನಿರಂಜನ್ ಶೆಟ್ಟಿ, ಸಂದೇಶ್, ಪುಷ್ಪರಾಜ್, ಪದ್ಮಪ್ರಸಾದ್, ವೃಂದ ರಾಜೇಂದ್ರ, ವೀಣಾ ರಘು ಚಂದ್ರ ಶೆಟ್ಟಿ, ಮಂಜುಳಾ ಅಭಯಚಂದ್ರ ಜೈನ್, ವಿಶಾಖ ಮತ್ತು ಬಿಂದಿಯಾ ಮತ್ತಿತರರು ಉಪಸ್ಥಿತರಿದ್ದರು.