ಪಾಲಡ್ಕದಲ್ಲಿ ಮೊಬೈಲ್ ಟವರ್ ಗೆ ಸಿಡಿಲು ಬಡಿದು ಹಾನಿ: ಓವ೯ನಿಗೆ ಗಾಯ
Friday, October 23, 2026
ಮೂಡುಬಿದಿರೆ: ಗುರುವಾರಂದು ಪಾಲಡ್ಕ ಗ್ರಾ.ಪಂ. ವ್ಯಾಪ್ತಿಯ ಕಡಂದಲೆ ಪೂಪಾಡಿಕಲ್ಲು ಪರಿಸರದಲ್ಲಿ ಮೊಬೈಲ್ ಟವರ್‌ಗೆ ಸಿಡಿಲು ಬಡಿದು ಹಾನಿಯಾಗಿದ್ದಲ್ಲದೆ ಓವ೯ನಿಗೆ ಗಾಯ ಉಂಟಾಗಿದೆ.
ಪಾಲಡ್ಕ ಪರಿಸರದಲ್ಲಿ ಗುರುವಾರ ರಾತ್ರಿ ಸಿಡಿಲಿನ ಅಬ್ಬರ ಜೋರಾಗಿದ್ದು ಮೊಬೈಲ್ ಟವರ್ ಗೆ ಸಿಡಿಲು ಬಡಿದಿದ್ದು ನೆಟ್‌ವರ್ಕ್ ಸಮಸ್ಯೆ ಉಂಟಾಗಿದೆ. ಇದೇ ವೇಳೆ ಪರಿಸರದ ಹಲವು ಮನೆಗಳ ವಿದ್ಯುತ್ ಉಪಕರಣಗಳು ಹಾಳಾಗಿದ್ದು, ಕಡಂದಲೆಯ ಪತ್ರಕರ್ತ ಜಗದೀಶ್ ಪೂಜಾರಿ ಅವರ ಕಾಲಿಗೂ ಗಾಯವಾಗಿರುವುದಾಗಿ ತಿಳಿದುಬಂದಿದೆ.
ಮೊಬೈಲ್ ನೆಟ್‌ವರ್ಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಸ್ಥಳೀಯರು ಮೊಬೈಲ್ ಸಂಪರ್ಕ ಪಡೆಯಲು ತೊಂದರೆ ಅನುಭವಿಸುವಂತಾಗಿದೆ.