ಮೂಡುಬಿದಿರೆ ದಸರಾ: ವಿವಿಧ ಕ್ಷೇತ್ರದ ಸಾಧಕರಿಗೆ ಸಮಾಜ ಮಂದಿರ ಗೌರವ

ಮೂಡುಬಿದಿರೆ ದಸರಾ: ವಿವಿಧ ಕ್ಷೇತ್ರದ ಸಾಧಕರಿಗೆ ಸಮಾಜ ಮಂದಿರ ಗೌರವ


ಮೂಡುಬಿದಿರೆ: ಸಮಾಜ ಮಂದಿರ ಸಭಾ (ರಿ.) ಮೂಡುಬಿದಿರೆ ವತಿಯಿಂದ 79 ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೂಡುಬಿದಿರೆ ದಸರಾ  ಉತ್ಸವದ ಎರಡನೇ ದಿನವಾಗಿರುವ ಸೋಮವಾರದಂದು ವಿಶ್ರಾಂತ ಪ್ರಾಂಶುಪಾಲ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಸಾಲಿಗ್ರಾಮ 'ನಗು-ಒಂದು ದಿವ್ಯೌಷದ' ಕುರಿತು ಉಪನ್ಯಾಸ  ನೀಡಿದರು. 

ತಹಶೀಲ್ದಾರ್ ಶ್ರೀಧರ್ ಎಸ್. ಮುಂದಲಮನಿ ಅಧ್ಯಕ್ಷತೆ ವಹಿಸಿದ್ದರು.

ಸಮಾಜ ಮಂದಿರ ಗೌರವ: 

ಅನುಷಾ ಪ್ರಜ್ವಲ್ ಆಚಾರ್ (ಜೌಷದೀಯ ಆಹಾರ), ಜೆ. ಜೆ.ಪಿಂಟೋ ( ಶಿಕ್ಷಣ),  ಅಬುಲಾಲ್ ಪುತ್ತಿಗೆ (ಉದ್ಯಮ, ಸಮಾಜ ಸೇವೆ)  ಹಾಗೂ ಹರೀಶ್ ಪಿ. (ನ್ಯಾಯವಾದಿ)  ಅವರಿಗೆ ಸಮಾಜ ಮಂದಿರ ಗೌರವ ನೀಡಿ ಗೌರವಿಸಲಾಯಿತು.

ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್, ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಪ್ರಧಾನ ಕಾಯ೯ದಶಿ೯ ಸುರೇಶ್ ಪ್ರಭು, ಕಾಯ೯ದಶಿ೯ ಎಂ.ಗಣೇಶ್ ಕಾಮತ್, ಸಂಚಾಲಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಸಹಿತ ಸವ೯ ಸದಸ್ಯರು ಉಪಸ್ಥಿತರಿದ್ದರು.

 ಸಭಾ ಕಾಯ೯ಕ್ರಮದ ಬಳಿಕ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಸಾರಥ್ಯದಲ್ಲಿ  ಯಕ್ಷನಿಧಿ ಮೂಡುಬಿದಿರೆ ಬಳಗದಿಂದ 'ಶಾಂಭವಿ-ವಿಜಯ' ಯಕ್ಷಗಾನ  ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article