ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿಯಿಂದ ಕಡಲಕೆರೆಯಲ್ಲಿ ಪ್ರಾಯೋಗಿಕ ಕಂಬಳಕ್ಕೆ ಚಾಲನೆ

ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿಯಿಂದ ಕಡಲಕೆರೆಯಲ್ಲಿ ಪ್ರಾಯೋಗಿಕ ಕಂಬಳಕ್ಕೆ ಚಾಲನೆ


ಮೂಡುಬಿದಿರೆ: ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು  ಜಿಲ್ಲೆಗಳನ್ನೊಳಗೊಂಡ ಕಂಬಳದ ಓಟಗಾರರ ತರಬೇತಿ ಶಿಬಿರದ ಅಂಗವಾಗಿ ತರಬೇತಿ ಪಡೆದ 42 ಮಂದಿ ಯುವ ಓಟಗಾರರಿಗೆ ಒಂಟಿಕಟ್ಟೆಯ ಕಡಲಕೆರೆಯಲ್ಲಿ ಏಪ೯ಡಿಸಿರುವ  ಪ್ರಾಯೋಗಿಕ ಕಂಬಳ ಗುರುವಾರ ನಡೆಯಿತು.


ಸಬ್ ಜೂನಿಯರ್ ಮತ್ತು ನೇಗಿಲು ಕಿರಿಯ ವಿಭಾಗದ ಸ್ಪರ್ಧೆಗಳಿಗೆ ಉದ್ಯಮಿ ಮಿಜಾರು ದೋಟ ಹರಿಮೀನಾಕ್ಷಿ  ಸುರೇಶ್ ಎಂ. ಶೆಟ್ಟಿ  ಅವರು ಚಾಲನೆ ನೀಡಿ, ಮೂರು ಲಕ್ಷ ರೂ. ವೆಚ್ಚದಲ್ಲಿ ದೋಟ ಸುರೇಶ್ ಶೆಟ್ಟಿ ಪ್ರಾಯೋಜಕತ್ವದ 'ಶ್ರೀ ಗುಣಪಾಲ ಕಡಂಬ ದೊಂಪದಡಿ' ಕೊಟ್ಟಿಗೆಯನ್ನು ಲೋಕಾಪ೯ಣೆಗೊಳಿಸಿ ಶುಭ ಹಾರೈಸಿದರು.


ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ, ಪುರಸಭೆ ಮಾಜಿ ಉಪಾಧ್ಯಕ್ಷ ನಾಗರಾಜ ಪೂಜಾರಿ,  ಕಂಬಳ ಉದ್ಘೋಷಕ ರವೀಂದ್ರ ಶೆಟ್ಟಿ ಕುಕ್ಕುಂದೂರು,ಕಂಬಳ ಓಟಗಾರ ಸುಹಾನ್, ಪ್ರಮುಖರಾದ ಶಿವ೯ ವಿಶ್ವನಾಥ್ ಪ್ರಭು, ಜಾನ್ ಸಿರಿಲ್ ಡಿಸೋಜ, ಜ್ವಾಲಾ ಪ್ರಸಾದ್, ಸುರೇಶ್ ಕೆ. ಪೂಜಾರಿ, ನವೀನ್ ಅಂಬೂರಿ, ರಘು ಪೆಲಕುಂಜ, ನವೀನ್ ಉಪಸ್ಥಿತರಿದ್ದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article