ಗೋಹತ್ಯಾ ನಿಷೇಧ ಆಗ್ರಹಿಸಿ ಒಂಟಿಕಟ್ಟೆಯಲ್ಲಿ ಸಹಿ ಸಂಗ್ರಹ ಅಭಿಯಾನ

ಗೋಹತ್ಯಾ ನಿಷೇಧ ಆಗ್ರಹಿಸಿ ಒಂಟಿಕಟ್ಟೆಯಲ್ಲಿ ಸಹಿ ಸಂಗ್ರಹ ಅಭಿಯಾನ

ಮೂಡುಬಿದಿರೆ: ಇಲ್ಲಿನ ವಂದೇಮಾತರಂ ಸೌಹಾರ್ದ ಸಹಕಾರಿ ಸಂಘ ಪ್ರವರ್ತಿತ ಶ್ರೀದುರ್ಗಾ ಸ್ವಸಹಾಯ ಸಂಘ ಒಂಟಿಕಟ್ಟೆ ಇದರ 13ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸ್ವರ್ಗೀಯ ಜಿ ಕೆ ಭಟ್ ಸ್ಮರಣಾರ್ಥ  ನಾಗಲಿಂಗ ಪುಷ್ಪದ ಗಿಡವನ್ನು ಗುಳಿಗ ದೈವಸ್ಥಾನ ಒಂಟಿಕಟ್ಟೆ ಇಲ್ಲಿ ನೆಡಲಾಯಿತು. 

ಇದೇ ಸಂದರ್ಭದಲ್ಲಿ ಅಗ್ನಿಹೋತ್ರ ಪ್ರಾತ್ಯಕ್ಷಿಕೆ, ತರಬೇತಿ ಹಾಗೂ ಇದರಿಂದಾಗುವ ಪ್ರಾಕೃತಿಕ ಮತ್ತು ಭೌತಿಕ ಪ್ರಯೋಜನಗಳ ಕುರಿತು ಮಾಹಿತಿ ನೀಡಲಾಯಿತು. 

ದೇಶೀ ಗೋವಿನ ಜಾಗೃತಿ, ಗೋಹತ್ಯಾ ನಿಷೇಧ ಮತ್ತು ಗೋವಿಗೆ ರಾಷ್ಟ್ರೀಯ ಸ್ಥಾನ ಮಾನ ನೀಡುವ ಕುರಿತು ಸಹಿ ಸಂಗ್ರಹ ಅಭಿಯಾನವನ್ನೂ ಮಾಡಲಾಯಿತು.

ಸಾಮಾಜಿಕ ಕಾರ್ಯಕರ್ತ, ರಾಜಾರಂ ನಾಗರಕಟ್ಟೆ, ವಂದೇಮಾತರಂ ನಿರ್ದೇಶಕ ರೋಹನ್, ಒಂಟಿಕಟ್ಟೆ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್, ವಿಶ್ವನಾಥ ಒಂಟಿಕಟ್ಟೆ, ಹಾಗೂ ಶ್ರೀ ದುರ್ಗಾ ಸ್ವಸಹಾಯ ಸಂಘದ ಸದಸ್ಯರು, ಮೇಲ್ವಿಚಾರಕಿ  ನಂದಿತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಅಮೃತ ಸಾವಯವ ಮಳಿಗೆಯ ಮಾಲಕರಾದ ಅಶೋಕ್ ಭಂಡಾರಿ ಅಲಂಗಾರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article