ವಿದ್ಯುತ್ ಆಘಾತ: ಮೆಸ್ಕಾಂ ಲೈನ್‌ಮೆನ್ ಮೃತ್ಯು
Sunday, October 4, 2026
ಪುತ್ತೂರು: ಕರ್ತವ್ಯದ ಸಮಯದಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೆಸ್ಕಾಂ ಇಲಾಖೆಯ ಲೈನ್‌ಮೆನ್ ಒಬ್ಬರು ಮೃತ ಪಟ್ಟ ಘಟನೆ ಕೆದಿಲ ಎಂಬಲ್ಲಿ ನಡೆದಿದೆ.
ಮೃತಪಟ್ಟಿರುವ ವ್ಯಕ್ತಿ ಕೆಮ್ಮಾಯಿ ನಿವಾಸಿ ರವಿ ಗೌಡ ಎಂದು ತಿಳಿದುಬಂದಿದೆ.
ಅವರು ಕೆದಿಲ, ಪಾಟ್ರಕೋಡಿ ಮತ್ತು ಮಿತ್ತೂರು ಗಡಿಯಾರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರೆ ಬಂದ ಹಿನ್ನಲೆಯಲ್ಲಿ ಕರ್ತವ್ಯ ನಿರ್ವಹಣೆಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ವಿದ್ಯುತ್ ಸಮಸ್ಯೆ ಪರಿಹರಿಸಲು ವಿದ್ಯುತ್ ಕಂಬಕ್ಕೆ ಹತ್ತಿದ ಸಂದರ್ಭ ವಿದ್ಯುತ್ ಆಘಾತ ಸಂಭವಿಸಿದೆ ಎನ್ನಲಾಗಿದೆ. ಮೃತರು ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.