ಕುಲ್ಕುಂದ ಬಸವೇಶ್ವರ ದೇವಸ್ಥಾನಕ್ಕೆ ಕೊಡುಗೆಗಳ ಮಹಾಪೂರ

ಕುಲ್ಕುಂದ ಬಸವೇಶ್ವರ ದೇವಸ್ಥಾನಕ್ಕೆ ಕೊಡುಗೆಗಳ ಮಹಾಪೂರ


ಸುಬ್ರಮಣ್ಯ: ಇತಿಹಾಸ ಪ್ರಸಿದ್ಧ ಸುಬ್ರಹ್ಮಣ್ಯ ಸಮೀಪದ  ಕುಲ್ಕುಂದ  ಬಸವೇಶ್ವರ ದೇವಸ್ಥಾನಕ್ಕೆ ಸ್ಥಳೀಯ ಬಸವೇಶ್ವರ ಭಜನಾ ಮಂಡಳಿ ವತಿಯಿಂದ ಕೊಡುಗೆಗಳ ಮಹಾಪೂರವೇ ಹರಿದು ಬಂದಿದೆ. 


ಬಸವೇಶ್ವರ ಜೀರ್ಣೋದ್ಧಾರ ಸಮಯದಲ್ಲಿ ಗಣಪತಿ ಗುಡಿಯ ನಿರ್ಮಾಣಕ್ಕೆ 4,O1111ರೂ. ದೇವಸ್ಥಾನದ ಒಳಾಂಗಣ ಶಾಶ್ವತ ಮೇಲ್ಚಾವಣಿಯ ಬಗ್ಗೆ 2,57000 ರೂ. ದೇವಸ್ಥಾನಕ್ಕೆ ಸೌಂಡ್ ಸಿಸ್ಟಮ್ ಬಗ್ಗೆ 43000 ರೂ. ದೇವಳದ ಜೀರ್ಣೋದ್ಧಾರ ಸಮಯ ಮಾಡಿದ ಸಾಲದ ಮರುಪಾವತಿ ಬಗ್ಗೆ ನಗರ ಭಜನೆ ಮಾಡಿ ನೀಡಿದ ಮೊತ್ತ 6,50,000 ರೂ. ಗಳಾಗಿವೆ.

ಇದೀಗ ಪಾಕಶಾಲೆ ನಿರ್ಮಾಣದ ಬಗ್ಗೆ 2,57,000 ಹಾಗೂ ದೇವಸ್ಥಾನಕ್ಕೆ ಜನರೇಟರ್ ಮತ್ತು ಗ್ರೈಂಡರ್ ಪಾತ್ರಗ ಗಳಿಗಾಗಿ ನೀಡಿದ ಮೊತ್ತ 2,50,000 ರೂಪಾಯಿಗಳಾಗಿವೆ. ಒಟ್ಟಾಗಿ ರೂ. 18,58000 ಕೂ ಮಿಕ್ಕಿ ಕೊಡುಗೆಗಳನ್ನು ಶ್ರೀ ದೇವಳಕ್ಕೆ ನೀಡಲಾಗಿದೆ.

ಗುರುವಾರ ಕಲಾವಿದ ಯಜ್ಞೇಶ್ ಆಚಾರ್ ಅವರ ಸಮ್ಮುಖದಲ್ಲಿ ಜನರೇಟರ್ ಹಾಗೂ ಪಾತ್ರ ಪರಿಕರಗಳನ್ನು ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ  ಸದಸ್ಯರುಗಳು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗು ಸದಸ್ಯರುಗಳು, ವರಮಹಾಲಕ್ಷ್ಮಿ ಅಧ್ಯಕ್ಷ ಹಾಗೂ ಸದಸ್ಯರುಗಳು, ಬಸವೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಹಾಗೂ ಸದಸ್ಯರುಗಳು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರುಗಳು, ಬಸವೇಶ್ವರ ಟ್ರಸ್ಟ್ ನ ಅಧ್ಯಕ್ಷ ಹಾಗೂ ಸದಸ್ಯರುಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರುಗಳು ಹಾಗೂ ಸ್ಥಳೀಯರು ಉಪಸಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article