ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಪ್ರಾಚೀನ ಶಿಲಾ ಶಾಸನ ಪತ್ತೆ
Sunday, November 15, 2026
ಬಂಟ್ವಾಳ: ಸಿದ್ದಕಟ್ಟೆ ಸಮೀಪದ ಆರಂಬೋಡಿ ಗ್ರಾಮದ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದ ಗದ್ದೆಯಲ್ಲಿ ಪ್ರಾಚೀನ ಶಿಲಾಶಾಸನವೊಂದು ದೊರಕಿದೆ.
ದೇವಸ್ಥಾನದ ಪಕ್ಕದ ಪಾಳು ಬಿದ್ದ ಗದ್ದೆಯಲ್ಲಿದ್ದ ಶಿಲೆಕಲ್ಲು ಸುಮಾರು ಎಂಟು ಅಡಿ ಎತ್ತರವಿದ್ದು, ನಾಲ್ಕು ಅಡಿಯಷ್ಟು ಕಲ್ಲು ಭೂಮಿಯೊಳಗೆ ಹೂತು ಹೋಗಿತ್ತು. ಮೇಲ್ಭಾಗದಲ್ಲಿ ಶಿಲೆಯ ಮೇಲೆ ತ್ರಿಶೂಲಾಕೃತಿಯ ರಚನೆ ಇದೆ. ಪಾಳು ಭೂಮಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು ಶಿಲೆಯನ್ನು ಮರೆ ಮಾಡಿತ್ತು. ಅದನ್ನು ಹೊರತೆಗೆಯುವಲ್ಲಿ ಈ ಹಿಂದೆ ಪ್ರಯತ್ನಗಳು ನಡೆದಿದ್ದು, ಯಶಸ್ವಿಯಾಗಿರಲಿಲ್ಲ. ಇದೀಗ ಕೆಲವು ದಿನಗಳ ಹಿಂದೆ ಶಿಲೆಯನ್ನು ಹೊರ ತೆಗೆದಿದ್ದಾರೆ. ಈ ಶಿಲಾಫಲಕದಲ್ಲಿ ಹಳೆಗನ್ನಡದಲ್ಲಿ ಕೆಲವು ಅಕ್ಷರಗಳನ್ನು ಬರೆಯಲಾಗಿದೆ. ಈ ಬಗ್ಗೆ ಇತಿಹಾಸ ತಜ್ಞರಾದ ಉಜಿರೆ ಡಾ.ಉಮಾನಾಥ ಶೆಣೈ ಅವರು ಪರಿಶೀಲನೆ ನಡೆಸಿದ್ದು, ಇದರ ಐತಿಹ್ಯವನ್ನು ನ.16 ರಂದು ದೇವಸ್ಥಾನದ ಪ್ರಮುಖರ ಹಾಗೂ ಭಕ್ತಾಧಿಗಳ ಸಮ್ಮುಖದಲ್ಲಿ ಪ್ರಕಟಗೊಳಿಸಲಿದ್ದಾರೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.