ಕೇಂದ್ರ ಸರ್ಕಾರದ ಕೈಗಾರಿಕಾ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಸಕುಟುಂಬಿಕರಾಗಿ ಧರ್ಮಸ್ಥಳ ಭೇಟಿ
Monday, November 16, 2026
ಧರ್ಮಸ್ಥಳ: ಕೇಂದ್ರಸರ್ಕಾರದ ಕೈಗಾರಿಕಾ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಸಕುಟುಂಬಿಕರಾಗಿ ಸೋಮವಾರ ಸಂಜೆ ಧರ್ಮಸ್ಥಳಕ್ಕೆ ಆಗಮಿಸಿದಾಗ ಅವರನ್ನು ಪೂರ್ಣಕುಂಭದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
ಬಳಿಕ ಅವರು ದೇವರ ದರ್ಶನ ಪಡೆದು, “ರಂಗಪೂಜೆ” ಸೇವೆಯನ್ನು ಸಲ್ಲಿಸಿದರು.
ಸಚಿವರ ಪತ್ನಿ ಅನಿತಾಕುಮಾರಸ್ವಾಮಿ, ಮಗ ನಿಖಿಲ್‌ಕುಮಾರಸ್ವಾಮಿ ಮತ್ತು ಸೊಸೆ ರೇವತಿ ನಿಖಿಲ್ ಕುಮಾರಸ್ವಾಮಿ ಜೊತೆಗಿದ್ದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇ ಗೌಡ ಉಪಸ್ಥಿತರಿದ್ದರು.
“ಶ್ರೀಸನ್ನಿಧಿ” ಅತಿಥಿಗೃಹದಲ್ಲಿ ತಂಗಿದ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಕಟುಂಬದವರು ಇಂದು ಮಂಗಳವಾರ ಸುಬ್ರಹ್ಮಣ್ಯಕ್ಕೆ ತೆರಳಿದರು.

