ಐಕಳದಲ್ಲಿ ಕೋಳಿಯನ್ನು ಕೊಂಡೊಯ್ದ ಚಿರತೆ

ಐಕಳದಲ್ಲಿ ಕೋಳಿಯನ್ನು ಕೊಂಡೊಯ್ದ ಚಿರತೆ


ಕಿನ್ನಿಗೋಳಿ: ಐಕಳ ಮಿತ್ತ ಕುರುಂಬಿಲ್ ಶಶಿಕಿರಣ್ ಅವರ ಮನೆಯಿಂದ ಕೋಳಿಯೊಂದನ್ನು ಚಿರತೆ ಬೇಟೆಯಾಡಿದ ಘಟನೆ ಶುಕ್ರವಾರ ಮುಂಜಾನೆ 2 ಗಂಟೆಗೆ ನಡೆದಿದ್ದು, ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಶಶಿಕಿರಣ್ ಅವರ ಮನೆಯಲ್ಲಿ ನಾಲ್ಕು ದನ ಮತ್ತು ಮೂರು ನಾಯಿಗಳಿದ್ದು, ದನ ಕೊಟ್ಟಿಗೆಯಲ್ಲಿತ್ತು ಮತ್ತು ನಾಯಿಗಳು ಗೂಡಿನಲ್ಲಿತ್ತು ಚಿರತೆಗೆ ನಾಯಿ ಮತ್ತು ದನಗಳನ್ನು ಬೇಟೆಯಾಡಲು ಸಾದ್ಯವಾಗಿಲ್ಲ. ಈ ಕಾರಣದಿಂದ ಮನೆಯ ಹಿಂಬದಿಯಲ್ಲಿದ್ದ ಬುಟ್ಟಿಯ ಒಳಗಿದ್ದ ಕೋಳಿಯನ್ನು ಬೇಟೆಯಾಡಿದೆ. ಎರಡು ತಿಂಗಳ ಹಿಂದೆ ಕೂಡ ಇವರ ಕೋಳಿ ನಾಪತ್ತೆಯಾಗಿದ್ದು, ಚಿರತೆ ಕೊಂಡೊಯ್ದಿರುವ ಸಾದ್ಯತೆ ಇದೆ ಎನ್ನುತ್ತಾರೆ ಶಶಿಕಿರಣ್ ಅವರು, ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಕೆಲವು ದಿನಗಳ ಹಿಂದೆ ಐಕಳ ಸಮೀಪದ ಜಲ್ಲಿ ಗುಡ್ಡೆಯಲ್ಲಿ ನಾಯಿಯೊಂದನ್ನು ಹಿಡಿದುಕೊಂಡು ಹೋದದ್ದು ವರದಿಯಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article