ಯು.ಆರ್. ಅನಂತಮೂರ್ತಿ ಅವರ ಕಾವ್ಯದ ಕುರಿತು ಉಪನ್ಯಾಸ ಕಾರ್ಯಕ್ರಮ

ಯು.ಆರ್. ಅನಂತಮೂರ್ತಿ ಅವರ ಕಾವ್ಯದ ಕುರಿತು ಉಪನ್ಯಾಸ ಕಾರ್ಯಕ್ರಮ

ಮಂಗಳೂರು: ಆರ್ಟ್ ಕೆನರಾ ಟ್ರಸ್ಟ್ ಹಾಗೂ ಇಂಟ್ಯಾಕ್ ಮಂಗಳೂರು ಘಟಕದ ಸಹಯೋಗದಲ್ಲಿ ಲೇಖಕ ಹಾಗೂ ಸಂಶೋಧಕ ಪ್ರೊ. (ಡಾ.) ವರದೇಶ ಹಿರೇಗಂಗೆ ಅವರು ‘ತಾತ್ತ್ವಿಕ ಕವಿಯಾಗಿ ಅನಂತಮೂರ್ತಿ’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನ.14 ರಂದು ಸಂಜೆ 5.30ಕ್ಕೆ ಮಂಗಳೂರಿನ ಬಲ್ಲಾಳ್‌ಬಾಗ್‌ನ ಜಿ.ಜಿ. ರಸ್ತೆಯಲ್ಲಿರುವ ಕೊಡಿಯಾಲ್‌ಗುತ್ತು ಕಲೆ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯಲಿದೆ.

ಕಾದಂಬರಿ, ಸಣ್ಣಕಥೆ ಹಾಗೂ ಸಾಹಿತ್ಯ ವಿಮರ್ಶೆಗಳಿಂದ ವ್ಯಾಪಕವಾಗಿ ಗುರುತಿಸಲ್ಪಟ್ಟಿರುವ ಯು.ಆರ್. ಅನಂತಮೂರ್ತಿಯವರ ಗಮನಾರ್ಹ ಸಂಖ್ಯೆಯ ಕವಿತೆಗಳು ಸಾಹಿತ್ಯ ವಲಯದಲ್ಲಿ ಅಷ್ಟಾಗಿ ಚರ್ಚೆಗೆ ಒಳಗಾಗಿಲ್ಲ. ಅವರ ಸಾಹಿತ್ಯದ ಈ ಕಡಿಮೆ ಚರ್ಚಿತ ಆಯಾಮದ ಮಹತ್ವವನ್ನು ಉಪನ್ಯಾಸವು ಪರಿಚಯಿಸಲಿದೆ. ಪ್ರೊ. ಹಿರೇಗಂಗೆ ಅವರು ಅನಂತಮೂರ್ತಿಯವರ ಶಿಕ್ಷಣ ತತ್ವದ ಕುರಿತು ಡಾಕ್ಟರೇಟ್ ಸಂಶೋಧನೆ ನಡೆಸಿದ್ದು, ಕಾವ್ಯಮೀಮಾಂಸೆ, ರಾಜಕೀಯ ಹಾಗೂ ತತ್ವಶಾಸ್ತ್ರ ಅವರ ಅಧ್ಯಯನದ ಪ್ರಮುಖ ಕ್ಷೇತ್ರಗಳಾಗಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article