ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಿರುವ ಬಿಜೆಪಿ: ಟಿ.ಎಂ. ಶಾಹೀದ್ ತೆಕ್ಕಿಲ್

ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಿರುವ ಬಿಜೆಪಿ: ಟಿ.ಎಂ. ಶಾಹೀದ್ ತೆಕ್ಕಿಲ್

ಮಂಗಳೂರು: ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 16 ಸಾವಿರ ಕೋಟಿ ರೂ.ವೆಚ್ಚದ ವಿವಿಧ ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ, ಸರಕಾರದಲ್ಲಿ ಹಣ ಇಲ್ಲ ಎಂದು ಬಿಜೆಪಿ ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳಂತೆ ಸಚಿವ ಸಂಪುಟದಲ್ಲಿ ಘೋಷಿಸಲಾದ ಎಲ್ಲ ಯೋಜನೆಗಳನ್ನು ಸರಕಾರ ಅನುಷ್ಠಾನ ಮಾಡಲಿದೆ ಎಂದು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹೀದ್ ತೆಕ್ಕಿಲ್ ಹೇಳಿದರು.

ಪಂಚಗ್ಯಾರಂಟಿ ಯೋಜನೆಗಳನ್ನು ನೀಡಿದಾಗ ಯಡಿಯೂರಪ್ಪ ಸಹಿತ ಬಿಜೆಪಿ ಮುಖಂಡರು ಇದೇ ರೀತಿ ಜನತೆಗೆ ತಪ್ಪು ಮಾಹಿತಿ ನೀಡಿದ್ದರು. ಗ್ಯಾರಂಟಿ ಯೋಜನೆ ಜಾರಿಗೊಳಿಸಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ರಾಜ್ಯದ ಕಾಂಗ್ರೆಸ್ ಸರಕಾರ ಜಗತ್ತಿನಲ್ಲೇ ಮಾದರಿ ಸರಕಾರ ಎನಿಸಿಕೊಂಡಿದೆ. ಇತರ ರಾಜ್ಯಗಳನ್ನು ನಮ್ಮ ಪಂಚಗ್ಯಾರಂಟಿಯನ್ನು ನಕಲು ಮಾಡುತ್ತಿವೆ. ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಯಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಬಿಜೆಪಿ ಜನರಿಗೆ ತಪ್ಪು ಮಾಹಿತಿ ನೀಡುವ ಜತೆಗೆ ದ್ವೇಷ ಭಾವನೆ ಮೂಡಿಸಿ, ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದೆ. ಬಿಜೆಪಿಯವರು ಕಪಟ ರಾಮಭಕ್ತರು. ಡಿ.ಕೆ. ಶಿವಕುಮಾರ್ ಅವರಂತಹ ದೇವರ ಭಕ್ತರು ಬಿಜೆಪಿಯಲ್ಲಿ ಯಾರೂ ಇಲ್ಲ. ಕೇಂದ್ರ ಸರಕಾರ ಎಲ್ಲ ಕ್ಷೇತ್ರಗಳಲ್ಲಿ ವಿ-ಲವಾಗಿದ್ದು, ಬಿಜೆಪಿಯವರು ದೇಶಕ್ಕೆ ಗಂಡಾಂತರ ತಂದಿದ್ದಾರೆ. ವಿದೇಶಾಂಗ ನೀತಿ ಸಂಪೂರ್ಣ ವಿ-ಲವಾಗಿದೆ. ರಾಜ್ಯಕ್ಕೆ ಜಿಎಸ್ಟಿ ಹಣ ವಾಪಸ್ ಬರುತ್ತಿಲ್ಲ. ಜನತೆ ಕೇಂದ್ರ ಸರಕಾರದ ವಿರುದ್ಧ ರೊಚ್ಚಿಗೇಳಲಿದ್ದಾರೆ ಎಂದರು.

ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಅವಽಯ ಸರಕಾರ, ಬಿಜೆಪಿ ಸಂಸದರು, ಶಾಸಕರು ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ತಿಳಿಸಲಿ ಎಂದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಪ್ರಮುಖರಾದ ಸುರೇಶ್ ಅಮೈ, ರಕ್ಷಿತ್ ದೊಡ್ಡಡ್ಕ, ರಾಧಾಕೃಷ್ಣ ಪರಿವಾರಕಾನ, ನಾಸೀರ್ ಸಾಮಾನಿಗೆ, ಹೇಮನಾಥ್ ಉಬರಡ್ಕ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article