ಗಿನ್ನೆಸ್ ದಾಖಲೆಗೆ ಸಂಗೀತ ಮ್ಯಾರಥಾನ್
ಸಂಜೆ 5.12 ಗಂಟೆಯಾಗುತ್ತಿದ್ದಂತೆ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ ಹಾಗೂ ಇತರ ಸಂಘಾಟಕರು ಹರ್ಷೋದ್ಗಾರದೊಂದಿಗೆ ವಿಶ್ವ ದಾಖಲೆಯನ್ನು ಸಂಭ್ರಮಿಸಿದರು. ಈ ಹಿಂದೆ 2024ರಲ್ಲಿ ವಡ್ತಾಲ್‌ನಲ್ಲಿ ಹರಿಕೃಷ್ಣ ಕೀರ್ತನ್ ಯಾಗ್ ಸಂಸ್ಥೆಯು ನಿರ್ಮಿಸಿದ್ದ 11 ದಿನಗಳು, 11 ಗಂಟೆಗಳು ಮತ್ತು 11 ನಿಮಿಷಗಳ (275 ಗಂಟೆಗಳು ಮತ್ತು 11 ನಿಮಿಷಗಳು) ಹಿಂದಿನ ಮೈಲಿಗಲ್ಲನ್ನು ಮಾಂಡ್ ಸೊಭಾಣ್ ಸಂಗೀತ ಮ್ಯಾರಥಾನ್ ಮೀರಿಸಿದೆ.
ಮಾಂಡ್ ಸೊಭಾಣ್ ಸಂಸ್ಥೆಯ 40 ನೇ ವಾರ್ಷಿಕೋತ್ಸವದ ನೆನಪಿಗಾಗಿ ಮತ್ತು ದಿವಂಗತ ಸಂಸ್ಥಾಪಕ ಎರಿಕ್ ಒಝೇರಿಯೊ ಅವರ ಸ್ಮರಣಾರ್ಥವಾಗಿ ಹಮ್ಮಿಕೊಳ್ಳಲಾದ ಮಹಾಸಂಗೀತ ಸಮ್ಮೇಳನದ ಪ್ರಮುಖ ಭಾಗವಾಗಿ ಈ ಐತಿಹಾಸಿಕ ದಾಖಲೆಯ ಪ್ರಯತ್ನ ನಡೆದಿತ್ತು.
ಸಂಗೀತ ಮ್ಯಾರಥಾನ್ ಗೆ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ ಅವರ ನೇತೃತ್ವದಲ್ಲಿ ನಡೆದ ತಿಂಗಳುಗಳ ನಿಖರ ಸಿದ್ಧತೆ ನಡೆದಿತ್ತು. ದಾಖಲೆಯ ನಂತರವೂ ಗಾಯನವು ಮುಂದುವರೆದಿದ್ದು, ಭಾನುವಾರ ಸಂಜೆ 5 ಗಂಟೆಗೆ ’ಟೀಮ್ ಸುಮೇಲ್’ ತಂಡದ ಹಾಡುಗಾರಿಕೆಯೊಂದಿಗೆ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಮೇಳಕ್ಕೆ ಅಧಿಕೃತ ತೆರೆ ಬೀಳಲಿದೆ.