ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ‘ಸ್ವರಾನುಭೂತಿ’ ಸಂಗೀತ ಸುಧೆ ಕಾರ್ಯಕ್ರಮ

ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ‘ಸ್ವರಾನುಭೂತಿ’ ಸಂಗೀತ ಸುಧೆ ಕಾರ್ಯಕ್ರಮ


ಮಂಗಳೂರು: ಮಂಗಳೂರಿನ ಸಂಗೀತ ಭಾರತೀ ಪ್ರತಿಷ್ಠಾನ ಪ್ರಸ್ತುತ ಪಡಿಸುವ ಉತ್ಕೃಷ್ಟ ಮಟ್ಟದ ‘ಸ್ವರಾನುಭೂತಿ’ ಸಂಗೀತ ಸುಧೆ ಕಾರ್ಯಕ್ರಮವು ನಗರದ ಅಂಬೇಡ್ಕರ್ ಭವನದಲಿದಲ್ಲಿ ನ.15 ರಂದು ಸಂಜೆ 05.30 ರಿಂದ ನಡೆಯಲಿದೆ.

ಕಾರ್ಯಕ್ರಮದ ಪೂರ್ವಾರ್ಧದಲ್ಲಿ ಪ್ರಸಿದ್ಧ ಕರ್ನಾಟಕೀ ಶಾಸ್ತ್ರೀಯ ಸಂಗೀತ ಕಲಾವಿದ ಶ್ರೀ ಮುರಳೀಧರ ಶೆಣೈ ಇವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ. ಇವರಿಗೆ ವಯೋಲಿನ್‌ನಲ್ಲಿ ಕಾಸರಗೋಡಿನ ಗಣರಾಜ್ ಕಾರ್ಲೆ, ಮೃದಂಗದಲ್ಲಿ ಲಯರತ್ನ ಪಾಲಾಕ್ಕಾಡ್ ಕೆ.ಎಸ್. ಮಹೇಶ್‌ಕುಮಾರ್ ಹಾಗೂ ಘಟಂನಲ್ಲಿ ವೆಲ್ಲತ್ತಂಜೂರು ಶ್ರೀಜಿತ್ ಅವರು ಸಾಥ್ ನೀಡಲಿದ್ದಾರೆ.

ಕಾರ್ಯಕ್ರಮದ ಉತ್ತರಾರ್ಧದಲ್ಲಿ ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲಿ ಚತುರಂಗಿ-ತಾರ್ ವಾದನ ನಡೆಯಲಿದ್ದು ಖ್ಯಾತ ಕಲಾವಿದ ಕೊಲ್ಕತ್ತಾದ ಪಂಡಿತ್ ದೇಬಾಶಿಷ್ ಭಟ್ಟಾಚಾರ್ಯ ಅವರು ಈ ವಿಶೇಷ ವಾದನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇವರಿಗೆ ತಬ್ಲಾದಲ್ಲಿ ಬೆಂಗಳೂರಿನ ಪಂಡಿತ್ ರವೀಂದ್ರ ಯಾವಗಲ್ ಅವರು ಸಾಥ್ ನೀಡಲಿದ್ದಾರೆ.

ಶಾಸ್ತ್ರೀಯ ಸಂಗೀತದ ವಿವಿಧ ಪ್ರಕಾರಗಳ ಸೊಗಡನ್ನು ಪರಿಚಯಿಸುವ ಈ ಕಾರ್ಯಕ್ರಮವು ಸಂಗೀತ ಪ್ರೇಮಿಗಳಿಗೆ ಅಪೂರ್ವ ಅನುಭವ ನೀಡುವ ನೀರೀಕ್ಷೆಯಿದೆ.

ಸಂಗೀತ ಭಾರತಿ ಫೌಂಡೇಶನ್ ದೇಶದ ಪ್ರತಿಷ್ಠಿತ ಕಲಾವಿದರ ಸಂಗೀತ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಆಯೋಜಿಸುತ್ತಾ, ಬರುತ್ತಿದೆ. ಈ ಮೂಲಕ ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸುವುದಲ್ಲದೆ, ಸಂಗೀತ ಪ್ರಿಯರಿಗೆ  ಸಂಗೀತ ಆಸ್ವಾದನೆಯ ಅವಕಾಶ ಕಲ್ಪಿಸುತ್ತಿದೆ.

ಈ ಕಾರ್ಯಕ್ರಮಕ್ಕೆ ಸಹ ಪ್ರಾಯೋಜಕರಾಗಿ ಬೆಂಗಳೂರಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಪ್ರಖ್ಯಾತ ಉದ್ಯಮಿ ಡಾ. ಪಿ. ದಯಾನಂದ ಪೈ, ಕೆನರಾ ಬ್ಯಾಂಕ್, ಆಭರಣ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕರ್ಣಾಟಕ ಬ್ಯಾಂಕ್, ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ ಸಹಕರಿಸಲಿದೆ.

ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು, ಸಂಗೀತ ರಸಿಕರು, ಸಂಗೀತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ನರೇಂದ್ರ ಎಲ್. ನಾಯಕ್ ಅವರು ಕೋರಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article