ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಗುಡ್ಡಗಾಡು ಓಟ: ಮಂಗಳೂರು ವಿಶ್ವವಿದ್ಯಾನಿಲಯ ಪ್ರತಿನಿಧಿಸಿದ ಆಳ್ವಾಸ್ ತಂಡ ಸಮಗ್ರ ಚಾಂಪಿಯನ್ಸ್-ಪ್ರತಿನಿಧಿಸಿದ 12 ಕ್ರೀಡಾಪಟುಗಳೂ ಆಳ್ವಾಸ್ ವಿದ್ಯಾರ್ಥಿಗಳು
ಮಹಿಳೆಯ ವಿಭಾಗ
ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವು ಸತತ ಐದನೇ ಬಾರಿಗೆ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಆಳ್ವಾಸ್‌ನ ಯಾಶಿ ಸಾಚನ್ ಐದನೇ, ಆರತಿ ಏಳನೇ, ಲಕ್ಷ್ಮೀ ಎಂಟನೇ ಹಾಗೂ ಭಾಗೀರಥಿ 11ನೇ ಸ್ಥಾನ ಪಡೆದು ತಂಡದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದರು. ಮಹಿಳಾ ತಂಡವು ಒಟ್ಟು 31 ಅಂಕಗಳನ್ನು ಗಳಿಸಿ ತಂಡ ಚಾಂಪಿಯನ್ಸ್ ಪ್ರಶಸ್ತಿಯನ್ನು ಪಡೆಯಿತು.
ಪುರುಷರ ವಿಭಾಗ
ಪುರುಷರ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿಗಳನ್ನೊಳಗೊಂಡ ಮಂಗಳೂರು ವಿಶ್ವವಿದ್ಯಾನಿಲಯ ತಂಡವು 72 ಅಂಕಗಳೊAದಿಗೆ ತೃತೀಯ ತಂಡ ಪ್ರಶಸ್ತಿ ಪಡೆದುಕೊಂಡಿತು. ಪುರುಷ ಮತ್ತು ಮಹಿಳಾ ವಿಭಾಗಗಳ ಒಟ್ಟು 103 ಅಂಕಗಳೊAದಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಎರಡು ವಿಭಾಗದಲ್ಲಿ ಸಮಗ್ರ ಚಾಂಪಿಯನ್ಸ್ ಪಟ್ಟವನ್ನು ತನ್ನದಾಗಿಸಿಕೊಂಡಿತು.
ಮAಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ 12 ಕ್ರೀಡಾಪಟುಗಳೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಆಳ್ವಾಸ್ ಕ್ರೀಡಾಪಟುಗಳ ಅತ್ಯುತ್ತಮ ಪ್ರದರ್ಶನದೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಈ ಮಹತ್ವದ ಸಾಧನೆ ಲಭಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ನಮ್ಮ ಎಲ್ಲಾ 12 ಕ್ರೀಡಾಪಟುಗಳು ಆಳ್ವಾಸ್ ವಿದ್ಯಾರ್ಥಿಗಳಾಗಿದ್ದು, ಅವರ ಈ ಸಾಧನೆ ನಮಗೆ ಹೆಮ್ಮೆ ತಂದಿದೆ. ಎರಡೂ ವಿಭಾಗದಲ್ಲಿ ತಂಡ ಚಾಂಪಿಯನ್ ಹಾಗೂ ಸತತ ಐದನೇ ಬಾರಿ ಮಹಿಳಾ ತಂಡ ಚಾಂಪಿಯನ್ಸ್ ಪಟ್ಟ ಗಳಿಸಿರುವುದು ಆಳ್ವಾಸ್‌ನ ಕ್ರೀಡಾ ಪೋಷಣೆ ಮತ್ತು ನಿರಂತರ ತರಬೇತಿಯ ಫಲವಾಗಿದೆ. ಈ ಯುವ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡಲಿ: ಡಾ ಎಂ ಮೋಹನ ಆಳ್ವ
