ಯಕ್ಷಮೇನಕಾ ಮೂಡುಬಿದಿರೆಯ 18ನೇ ವರ್ಷದ ಕಾರ್ಯಕ್ರಮ: ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ

ಯಕ್ಷಮೇನಕಾ ಮೂಡುಬಿದಿರೆಯ 18ನೇ ವರ್ಷದ ಕಾರ್ಯಕ್ರಮ: ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ


ಮೂಡುಬಿದಿರೆ: ಯಕ್ಷಮೇನಕಾ ಮೂಡುಬಿದಿರೆ ಇದರ 18ನೇ ವರ್ಷದ ಕಾರ್ಯಕ್ರಮ ಪೊನ್ನೆಚಾರಿ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಟೀಲು ಮೇಳದ ಹಿರಿಯ ಭಾಗವತ ಪುಂಡಿಕಾಯ್ ಗೋಪಾಲಕೃಷ್ಣ ಭಟ್ ಹಾಗೂ ಹಿರಿಯ ವೇಷಧಾರಿ ವಿಷ್ಣು ಶರ್ಮ ವಾಟೆಪಡ್ಪು ಅವರನ್ನು ಸನ್ಮಾನಿಸಲಾಯಿತು.

ನಿಟ್ಟೆ ಎನ್.ಆರ್.ಎಂ. ಪಾಲಿಟೆಕ್ನಿಕ್‌ನ ನಿವೃತ್ತ ಪ್ರಾಂಶುಪಾಲ ಪ್ರಶಾಂತ್ ಹೊಳ್ಳ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗಸ್ಥಳ ಮಂಗಳೂರು ಸ್ಥಾಪಕ ಯಸ್.ಯಲ್. ನಾಯಕ್ ಮತ್ತು ಕವಿ, ಯಕ್ಷಗಾನ ಕಲಾವಿದ ದಾಮೋದರ ಶೆಟ್ಟಿ ಇರುವೈಲು ಉಪಸ್ಥಿತರಿದ್ದರು.

ಕಟೀಲು ಮೇಳದಲ್ಲಿ 33 ವರ್ಷಗಳ ಕಾಲ ತಿರುಗಾಟ ಮಾಡಿ, ಪ್ರಸ್ತುತ 34ನೇ ವರ್ಷದ ತಿರುಗಾಟದಲ್ಲಿರುವ ಪುಂಡಿಕಾಯ್ ಗೋಪಾಲಕೃಷ್ಣ ಭಟ್ ಹಾಗೂ ಕಟೀಲು ಮೇಳದಲ್ಲಿ ಪ್ರಸ್ತುತ 40ನೇ ವರ್ಷದ ತಿರುಗಾಟದಲ್ಲಿರುವ ಹಿರಿಯ ವೇಷಧಾರಿ ವಿಷ್ಣು ಶರ್ಮ ವಾಟೆಪಡ್ಪು ಅವರನ್ನು ಗೌರವಿಸಲಾಯಿತು.

ಸದಾಶಿವ ನೆಲ್ಲಿಮಾರ್ ಸನ್ಮಾನಿತರ ಅಭಿನಂದನಾ ಭಾಷಣ ಮಾಡಿದರು. ನಿವೃತ್ತ ಪೊಲೀಸ್ ಅಧಿಕಾರಿ ರಾಜಾರಾಮ್ ನಾಗರಕಟ್ಟೆ ಇತ್ತೀಚೆಗೆ ನಿಧನರಾದ ಭಾಗವತ ಮಾಧವ ಆಚಾರ್ಯ ಸಂಪಿಗೆ ಅವರ ಸಂಸ್ಮರಣಾ ಭಾಷಣ ಮಾಡಿದರು.

ಅಧ್ಯಕ್ಷೀಯ ಭಾಷಣದಲ್ಲಿ ಪ್ರಶಾಂತ್ ಹೊಳ್ಳ ಮಾತನಾಡಿ, ಇಂತಹ ಕಲಾ ಸಂಘಟನೆಗಳು ಯಕ್ಷಗಾನ ಪರಂಪರೆ ಉಳಿದು ಬೆಳಗಲು ತುಂಬಾ ಸಹಕಾರಿಯಾಗಿವೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಯಕ್ಷಚೈತನ್ಯದ ಅಧ್ಯಕ್ಷ ಕಟೀಲು ಕೃಷ್ಣಮೂರ್ತಿ ಹಾಗೂ ಪ್ರಗತಿಪರ ಕೃಷಿಕ ರಮೇಶ್ ಭಟ್ ಕೇಂಜೆ ಉಪಸ್ಥಿತರಿದ್ದರು. ಸಂಘದ ಸದಸ್ಯ ಶಿವದತ್ತ ಭಟ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ "ಕೈಕೆ-ಮಂಥರೆ", "ವಾಲಿ-ಸುಗ್ರೀವ" ಹಾಗೂ "ಶ್ರೀರಾಮ-ರಾವಣ" ತಾಳಮದ್ದಳೆಗಳ ಸಂವಾದ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article