ಆಳ್ವಾಸ್ ಪ.ಪೂ. ಕಾಲೇಜಿಗೆ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಸಮಗ್ರ ಪ್ರಶಸ್ತಿ: 25 ಚಿನ್ನ, 16 ಬೆಳ್ಳಿ, 18 ಕಂಚು ಸೇರಿ 59 ಪದಕಗಳ ಸಾಧನೆ

ಆಳ್ವಾಸ್ ಪ.ಪೂ. ಕಾಲೇಜಿಗೆ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಸಮಗ್ರ ಪ್ರಶಸ್ತಿ: 25 ಚಿನ್ನ, 16 ಬೆಳ್ಳಿ, 18 ಕಂಚು ಸೇರಿ 59 ಪದಕಗಳ ಸಾಧನೆ


ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ದಕ್ಷಿಣ ಕನ್ನಡ ಹಾಗೂ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ಪ.ಪೂ. ಕಾಲೇಜು ಸಮಗ್ರ ಪ್ರಶಸ್ತಿ ಗಳಿಸಿದೆ.

ಕಾಲೇಜು 25 ಚಿನ್ನ, 16 ಬೆಳ್ಳಿ, 18 ಕಂಚು ಸೇರಿ ಒಟ್ಟು 59 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಬಾಲಕರ ವಿಭಾಗದಲ್ಲಿ 104, ಬಾಲಕಿಯರ ವಿಭಾಗದಲ್ಲಿ 85 ಸೇರಿದಂತೆ ಒಟ್ಟು 189 ಅಂಕ ಗಳಿಸಿ ಸಮಗ್ರ ಪ್ರಶಸ್ತಿ ಪಡೆಯಿತು.

ಸಮಾರೋಪದಲ್ಲಿ ಪ್ರಾಂಶುಪಾಲರಾದ ಮೊಹಮ್ಮದ್ ಸದಾಕತ್, ಡಾ. ಮಧು ಜಿ.ಆರ್., ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಧಾಕೃಷ್ಣ, ನವೀನ್ ರೈ, ಹರ್ಷಿತಾ ಶೆಟ್ಟಿ ಹಾಗೂ ಉಪನ್ಯಾಸಕ ಕುಮಾರ್ ಉಪಸ್ಥಿತರಿದ್ದರು. ಶಾಂತರಾಮ ರೈ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article