ಆಟೋ ರಿಕ್ಷಾ ಮಾಲಕ ಚಾಲಕರ ಸಂಘದಿಂದ ಶ್ರೀ ಧನಲಕ್ಷ್ಮೀ ವಾಹನ ಪೂಜೆ ಹಾಗೂ ಸನ್ಮಾನ ಕಾಯ೯ಕ್ರಮ
Monday, November 9, 2026
ಮೂಡುಬಿದಿರೆ: ಇಲ್ಲಿನ ಆಟೋ ರಿಕ್ಷಾ ಮಾಲಕ ಚಾಲಕರ ಸಂಘದ ವತಿಯಿಂದ ಶ್ರೀ ಧನಲಕ್ಷ್ಮೀ ವಾಹನ ಪೂಜೆ ಹಾಗೂ ಸನ್ಮಾನ ಕಾಯ೯ಕ್ರಮವು ಸೋಮವಾರ ಸಂಜೆ ನಡೆಯಿತು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಸಮಾಜದ ಬಡವರ ಕಷ್ಟಗಳಿಗೆ ಸ್ಪಂದಿಸುವವರು ಆಟೋ ಚಾಲಕರು. ತಾವು ತಮಗೆ ಎದುರಾಗುವ ಕಷ್ಟಗಳನ್ನು ಎದುರಿಸಿ ಮುಂದೆ ಸಾಗಬೇಕು ಎಂದು ಹೇಳಿದರು.
ಸಮಿತಿಯ ಗೌರವಾಧ್ಯಕ್ಷ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಶರತ್ ಡಿ. ಶೆಟ್ಟಿ ಮಾತನಾಡಿ ಧಮ೯, ಪಕ್ಷ, ಜಾತಿ ಬೇರೆ ಬೇರೆಯಾಗಿದ್ದರೂ ಒಂದೇ ತಾಯಿಯ ಮಕ್ಕಳಂತೆ ಒಟ್ಟಾಗಿ ಪ್ರೀತಿಯಿಂದ ಇರುವವರು ಮೂಡುಬಿದಿರೆಯ ಆಟೋ ಚಾಲಕ, ಮಾಲಕರು ಎಂದರು.
ಸನ್ಮಾನ: ಸಮಾಜ ಸೇವಕ, ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್, ವೈದ್ಯ ಕ್ಲೀಟಸ್ ಪಿಂಟೋ, ಬಾಲಕೃಷ್ಣ ಭಟ್ ಹಾಗೂ ಅಬ್ಬು ಹುಸೇನ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ತಮ್ಮ ಆಟೋಗಳನ್ನು ಅತ್ಯುತ್ತಮ ರೀತಿಯಲ್ಲಿ ಸಿಂಗರಿಸಿರುವ ಆಟೋ ಚಾಲಕರಾದ ಭುವನೇಶ್ ಗಾಂಧಿನಗರ, ರಮೇಶ್ ಚಿತ್ತಾರ, ಕೇಶವ್ ಗಾನಸುಧಾ ಸುಭಾಷ್ ನಗರ ಹಾಗೂ ಕುಮಾರ್ ಮಾಸ್ತಿಕಟ್ಟೆ ಅವರನ್ನು ಗೌರವಿಸಲಾಯಿತು.
ದ.ಕ. ಹಾಲು ಉತ್ಪಾದಕರ ಒಕ್ಕೂಟದ ನಿದೇ೯ಶಕ ಕೆ. ಪಿ. ಸುಚರಿತ ಶೆಟ್ಟಿ, ಪುರಸಭಾ ಮಾಜಿ ಸದಸ್ಯರಾದ ಎಂ. ಸುರೇಶ್ ಕೋಟ್ಯಾನ್, ಕೊರಗಪ್ಪ ಉಪಸ್ಥಿತರಿದ್ದರು. ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.
ಸಂಘದ ಅಧ್ಯಕ್ಷ ಮಜೀದ್ ಕೊಡಂಗಲ್ಲು ಸ್ವಾಗತಿಸಿದರು. ಶ್ರೀರಾಜ್ ಸನಿಲ್ ಬೆಳುವಾಯಿ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.
ಆಲಂಗಾರು ಈಶ್ವರ್ ಭಟ್ ನೇತೃತ್ವದ ತಂಡದವರು ಪೂಜಾ ವಿಧಾನಗಳನ್ನು ನೆರವೇರಿಸಿದರು.

