ಹೃದಯಾಘಾತದಿಂದ ಯುವಕ ಸಾವು
Monday, November 9, 2026
ಮೂಡುಬಿದಿರೆ: ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ವಾಪಾಸಾಗಿದ್ದ ಯುವಕನೋರ್ವ ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು.
ಕಳೆದ ಮೂರು ತಿಂಗಳ ಹಿಂದೆ ಅಳಿಯೂರಿನಲ್ಲಿ ನಡೆದಿದ್ದ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದಿದ್ದ ಶಿರ್ತಾಡಿ ಮಕ್ಕಿಯ ನಿವಾಸಿ, ಚಾಲಕ ವೃತ್ತಿ ಮಾಡುತ್ತಿದ್ದ ಚೇತನ್ (30) ಮೃತಪಟ್ಟ ಯುವಕ.
ಚೇತನ್ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಾಸಾಗಿದ್ದರು.
ಬದಲಿ ಚಾಲಕನಾಗಿ ದುಡಿಯುತ್ತಿದ್ದ ಅವರು ಇತ್ತೀಚಿನಿಂದ ಎಲೆಕ್ಟ್ರಿಕಲ್ ವೃತ್ತಿ ಮಾಡುತ್ತಿದ್ದರು.
ಭಾನುವಾರ ಕೆಲಸ ಮುಗಿಸಿಕೊಂಡು ಬಂದು ಮಲಗಿದ್ದಾತ ಬೆಳಿಗ್ಗೆ ಎದ್ದೇಳಿರಲಿಲ್ಲ. ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.