ವೈದ್ಯ ಎನ್. ಪ್ರಭಾಚಂದ್ರ ಅವರಿಗೆ ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ
ಅವರು ಮೂಡುಬಿದಿರೆ ಕೋ-ಅಪರೇಟಿವ್ ಸವೀ೯ಸ್ ಸೊಸೈಟಿಯಲ್ಲಿ ಸಹಕಾರಿ ಸಪ್ತಾಹದ ಕೊನೆಯ ದಿನವಾಗಿರುವ ಶುಕ್ರವಾರ ಸಂಜೆ ಕಲ್ಪವೃಕ್ಷ ಸಭಾಂಗಣದಲ್ಲಿ ನಡೆದ ಕಾಯ೯ಕ್ರಮದಲ್ಲಿ ಕಡಿಮೆ ದರದಲ್ಲಿ ಜನರಿಗೆ ವೈದ್ಯಕೀಯ ಸೇವೆ ನೀಡುತ್ತಾ ಜನಪರ ಕಾರ್ಯನಿರ್ವಹಿಸುತ್ತಿರುವ ಡಾ. ಎನ್. ಪ್ರಭಾಚಂದ್ರ ಅವರಿಗೆ ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿ ಕೊಡಮಾಡುವ ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೈದ್ಯಕೀಯ ಲೋಕದ ಸಿದ್ಧಾಂತವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕರೋನ ದಂತಹ ಮಾರಕ ಸಂದರ್ಭದಲ್ಲಿ ಚಿಕಿತ್ಸೆ ನೀಡಿರುವುದು ಪ್ರಭಾಚಂದ್ರರ ಗರಿಮೆ ಎಂದು ಬಣ್ಣಿಸಿದರು.
ಸಂಪಿಗೆ ಹೋಲಿ ಸ್ಪಿರಿಟ್ ಚರ್ಚಿನ ಧರ್ಮ ಗುರುಗಳಾದ ರೇ ಫಾ ವಿನ್ಸೆಂಟ್ ಡಿಸೋಜಾ ಮಾತನಾಡಿ ಸರ್ವರ ಒಳಿತಿಗೆ ಚಿಂತಿಸಿದಾಗ ನಮ್ಮ ಬದುಕು ಉತ್ತಮವಾಗುತ್ತದೆ. ದೇವರು ಕೂಡ ನಮ್ಮ ಬಳಿ ಬರುತ್ತಾರೆ ಎಂದು ಆಶೀರ್ವಚಿಸಿದರು.
ಡಾಕ್ಟರೇಟ್ ಪುರಸ್ಕೃತ ಪವಿತ್ರ ಪ್ರಸಾದ್, ಮುಂಬೈ ಯ ಸುಕುಮಾರ್ ರಾವ್, ಪಿಯು ಉನ್ನತ ಅಂಕ ಸಾಧಿಸಿದ ದಿಶಾ ಪೂಜಾರಿ ಯವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಮಾರ್ಪಾಡಿ ಪ್ರಾಂತ್ಯ ಗ್ರಾಮಗಳ 17 ಅಂಗನವಾಡಿ ಕೇಂದ್ರಗಳಿಗೆ ಆರ್ಥಿಕ ನೆರವು ನೀಡಲಾಯಿತು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಅಭಿನಂದನ ಭಾಷಣ ಗೈದು ಆತ್ಮೀಯತೆಯ ಸೆಳೆತ ಹೊಂದಿರುವ ಸಹೃದಯಿ, ಕೃಷಿ ಕ್ರಿಕೆಟ್ ರಾಜಕೀಯ ಧಾರ್ಮಿಕ ಕ್ಷೇತ್ರದ ವಿಶೇಷ ಆಸಕ್ತರು, ವೈದ್ಯಕೀಯ ಲೋಕದ ಧ್ರುವತಾರೆ ಎಂದು ಡಾ. ಎನ್ ಪ್ರಭ ಚಂದ್ರರನ್ನು ಬಣ್ಣಿಸಿದರು.
ಎಂ ಸಿ ಎಸ್ ಸೊಸೈಟಿಯ ಅಧ್ಯಕ್ಷರಾದ ಬಾಹುಬಲಿ ಪ್ರಸಾದ್, ಸೊಸೈಟಿ ನಿರ್ದೇಶಕರು ಮಾಜಿ ಸಚಿವರು ಕೆ ಅಭಯಚಂದ್ರ, ಪ್ರಖ್ಯಾತ ಉದ್ಯಮಿ ಕೆ ಶ್ರೀಪತಿ ಭಟ್ ಉಪನ್ಯಾಸಕ ಎಂ ಗಣೇಶ್ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಸ್ವಾಗತಿಸಿ, ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಭಟ್ ಧನ್ಯವಾದವಿತ್ತರು. ಹೆರಾಲ್ಡ್ ತಾವ್ರೋ ಪ್ರಾರ್ಥನೆಗೈದರು