ಬಿಜೆಪಿಯು ಪಂಚ ಗ್ಯಾರಂಟಿಯನ್ನು ವಿರೋಧಿಸಿ "ಜನಾಕ್ರೋಶ"ದ ಮೂಲಕ ಜನರ ದಾರಿ ತಪ್ಪಿಸುತ್ತಿದೆ: ಅರುಣ್ ಕುಮಾರ್ ಶೆಟ್ಟಿ ಆರೋಪ

ಬಿಜೆಪಿಯು ಪಂಚ ಗ್ಯಾರಂಟಿಯನ್ನು ವಿರೋಧಿಸಿ "ಜನಾಕ್ರೋಶ"ದ ಮೂಲಕ ಜನರ ದಾರಿ ತಪ್ಪಿಸುತ್ತಿದೆ: ಅರುಣ್ ಕುಮಾರ್ ಶೆಟ್ಟಿ ಆರೋಪ


ಮೂಡುಬಿದಿರೆ: ಸಿದ್ಧರಾಮಯ್ಯ ಅವರು  ಮುಖ್ಯಮಂತ್ರಿಯಾಗಿದ್ದಾಗ ಮತ್ತು ಈಗ  ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಅವರು  ಪಂಚಗ್ಯಾರಂಟಿ ಯೋಜನೆಯ ಮೂಲಕ  ಬಡಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದು ಇದು ದೇಶದಾದ್ಯಂತ ಮನೆಮಾತಾಗಿದೆ ಆದರೆ ಬಿಜೆಪಿಯು ಈ ಯೋಜನೆಯನ್ನು ವಿರೋಧಿಸಿ 'ಜನಾಕ್ರೋಶ ಆಂದೋಲನ'ದ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ಅವರು ಗುರುವಾರ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. 

ಮೂಡುಬಿದಿರೆ ತಾಲೂಕಿನಲ್ಲಿ 19,657 ಮಂದಿ ಗೃಹಲಕ್ಷ್ಮಿ ಫಲಾನುಭವಿಗಳು,ಅನ್ನಭಾಗ್ಯ ಯೋಜನೆಯಡಿ 22,901 ಪಡಿತರ ಚೀಟಿ ಇದ್ದು 93,461 ಮಂದಿ ಫಲಾನುಭವಿಗಳಿದ್ದಾರೆ, ಗೃಹಜ್ಯೋತಿಯಲ್ಲಿ 28,725 ಮನೆಗಳು ಉಚಿತ ವಿದ್ಯುತನ್ನು ಪಡೆಯುತ್ತಿದೆ, 322 ಮಂದಿ ಯುವನಿಧಿಯ ಫಲಾನುಭವಿಗಳಿದ್ದಾರೆ, ಶಕ್ತಿ ಯೋಜನೆಯಲ್ಲಿ ಸರಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶವಿದ್ದು ಇದರ ಪ್ರಯೋಜನವನ್ನೂ ಈಭಾಗದ ಮಹಿಳೆಯರು ಪಡೆಯುತ್ತಿದ್ದಾರೆ ಎಂದ ಅವರು ಗೃಹಲಕ್ಷ್ಮಿ ಯೋಜನೆಯಡಿ ಮೂಡುಬಿದಿರೆ ತಾಲೂಕಿಗೆ ಇಷ್ಟರವರೆಗೆ 114 ಕೋಟಿ ರೂ.ಮಹಿಳೆಯರ ಖಾತೆಗೆ ಜಮೆಯಾಗಿದೆ,ಒಂದು ಕಂತಿಗೆ ಸುಮಾರು ನಾಲ್ಕು ಕೋಟಿಯಷ್ಟು ಹಣ ಮೂಡುಬಿದಿರೆ ತಾಲೂಕಿಗೆ ಬರುತ್ತಿದೆ, 33 ಕಂತುಗಳಲ್ಲಿ ಹಣ ಇಷ್ಟರವರೆಗೆ ಬಂದಿದ್ದು 34, 35 ಮತ್ತು 36 ನೇ ಕಂತಿನ ಹಣ ದೀಪಾವಳಿಯ ಬಹುಮಾನ ರೂಪದಲ್ಲಿ ಈ ವಾರ ಜಮೆಯಾಗಲಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯದ ಮಹಿಳೆಯರು ಸರಕಾರದ ಶಕ್ತಿ ಯೋಜನೆಯಲ್ಲಿ ಉಚಿತ ಬಸ್ ಮೂಲಕ ರಾಜ್ಯದಾದ್ಯಂತ ಪ್ರಯಾಣ ಬೆಳೆಸಿ ಕುಷಿಪಟ್ಟಿದ್ದಾರೆ,ಮಕ್ಕಳ ಶಾಲಾ ಶುಲ್ಕ ಕಟ್ಟಲು,ಔಷಧೋಪಚಾರಕ್ಕೆ ಮಹಿಳೆಯರು ತಮಗೆ ಬರುವ ಗೃಹಲಕ್ಷ್ಮಿ ಯೋಜನೆಯ ಹಷ೯ವನ್ನು ಬಳಸುತ್ತಿದ್ದಾರೆ, ಪಂಚಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನರಿಂದು ನೆಮ್ಮದಿಯ ಜೀವನ ಸಾಗಿಸುತ್ತಿರಬೇಕಾದರೆ ಬಿಜೆಪಿಯವರು ಮಾತ್ರ ಜನರ ದಾರಿ ತಪ್ಪಿಸಿ ಪಂಚ ಗ್ಯಾರಂಟಿಯನ್ನು ವಿರೋಧಿಸುತ್ತಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿದ್ದರೂ  ಪಂಚಗ್ಯಾರಂಟಿಯನ್ನು ವಿರೋಧಿಸುತ್ತಾ ಬಂದಿರುವ ಬಿಜೆಪಿ ‘ಅಭಿವೃದ್ಧಿಗೆ ಹಣ ಬರುತ್ತಿಲ್ಲ,ಪಂಚಗ್ಯಾರಂಟಿಯನ್ನು ನಿಲ್ಲಿಸಿ’ ಎಂದು ಅಲ್ಲಲ್ಲಿ ಜನಾಕ್ರೋಶ ಪ್ರತಿಭಟನೆ ನಡೆಸುತ್ತಿದೆ,ಅರ್ಥವೇ ಇಲ್ಲದ ಬಿಜೆಪಿಯವರ ಈ ಜನಾಕ್ರೋಶಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆಂದು ಅವರು ಹೇಳಿದರು.

ಪೆಟ್ರೋಲ್ ಬೆಲೆ ಲೀಟರ್ ಗೆ 112 ರೂ.ಆಗಿದೆ, ಗ್ಯಾಸ್ ಗೆ ಒಂದು ಸಾವಿರ ಆಗಿದೆ, ರೈತರ ರಸಗೊಬ್ಬರದ ಬೆಲೆಯೇರಿಕೆಯಾಗಿದೆ,ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಿಲ್ಲ,ಆದರೂ ವಿಜಯ್ ಮಲ್ಯ, ಅದಾನಿ,ಅಂಬಾನಿ, ನೀರವ್ ಮೋದಿ,ಲಲಿತ್ ಮೋದಿ ಮುಂತಾದ ಕಾರ್ಪೊರೇಟರ್ ಗಳ ಲಕ್ಷಾಂತರ ಕೋಟಿ ರೂ.ಸಾಲ ಮನ್ನಾ ಮಾಡಿದೆ,ಕೇಂದ್ರೀಕೃತ ಬ್ಯಾಂಕುಗಳಲ್ಲಿ ಉತ್ತರಭಾರತದವರೇ ಕೆಲಸಕ್ಕಿದ್ದು ನಮ್ಮೂರಿನ ಯುವಕ ಯುವತಿಯರಿಗೆ ಕೆಲಸವಿಲ್ಲ, ಬಿಜೆಪಿಯವರಿಗೆ ಜನರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಇದೆಲ್ಲದರ ವಿರುದ್ಧ ಜನಾಕ್ರೋಶ ಪ್ರತಿಭಟನೆ ಮಾಡಬೇಕೇ ಹೊರತು ಜನರ ನೆಮ್ಮದಿ ಮತ್ತು ರಾಜ್ಯದ ಅಭಿವೃದ್ಧಿ ಮಾಡುತ್ತಿರುವ ಕಾಂಗ್ರೆಸ್ ಸರಕಾರದ ವಿರುದ್ಧ ಅಲ್ಲ ಎಂದು ಅರುಣ್ ಕುಮಾರ್ ಶೆಟ್ಟಿ ಹೇಳಿದರು.

ಗ್ಯಾರಂಟಿ ಯೋಜನೆಯ ಸದಸ್ಯರಾದ ಶಿವಾನಂದ ಪಾಂಡ್ರು,ಶೌಕತ್ ಬೆಳುವಾಯಿ, ಪ್ರಭಾಕರ ದರೆಗುಡ್ಡೆ, ಶಕುಂತಲಾ ಹರೀಶ್, ರಜನಿ ಹಾಗೂ ಬಾಲಕೃಷ್ಣ ದೇವಾಡಿಗ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article