ರಾಜ್ಯ ಸರಕಾರದ ಜನ ವಿರೋಧಿ ನೀತಿ ಖಂಡಿಸಿ ವಾಲ್ಪಾಡಿಯಲ್ಲಿ ಬಿಜೆಪಿ ಪ್ರತಿಭಟನೆ
Monday, November 2, 2026
ಮೂಡುಬಿದಿರೆ: ಸ್ಥಳೀಯ ಆಡಳಿತಕ್ಕೆ ಸೌಲಭ್ಯ, ಅನುದಾನಗಳನ್ನು ನೀಡದೆ ಜನರನ್ನು ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಾರ್ಟಿಯ ವಾಲ್ಪಾಡಿ ಶಕ್ತಿಕೇಂದ್ರದ ವತಿಯಿಂದ ವಾಲ್ಪಾಡಿ ಪಂಚಾಯತ್ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಲಾಯಿತು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ದಿನೇಶ್ ಪುತ್ರನ್, ಮಂಡಲ ಪ್ರಭಾರಿಗಳಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಸ್ತುವಾರಿ ಈಶ್ವರ್ ಕಟೀಲ್, ಮಂಡಲ ಉಪಾಧ್ಯಕ್ಷರಾದ ಸುಕೇಶ್ ಶೆಟ್ಟಿ,ಮಹಾಶಕ್ತಿಕೇಂದ್ರ ಅಧ್ಯಕ್ಷ ಸೋಮನಾಥ್ ಕೋಟ್ಯಾನ್, ಕಾರ್ಯದರ್ಶಿ ಜಯಂತ್ ಹೆಗ್ಡೆ, ಓಬಿಸಿ ಮೋರ್ಚಾದ ಅಧ್ಯಕ್ಷರಾದ ಪ್ರದೀಪ್ ಕುಮಾರ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ಶೆಟ್ಟಿ ಸೇರಿದಂತೆ ಶಕ್ತಿಕೇಂದ್ರ ಪ್ರಮುಖರು, ಪಂಚಾಯತ್ ಮಾಜಿ ಜನಪ್ರತಿನಿಧಿಗಳು, ಪಕ್ಷದ ವಿವಿಧ ಪದಾಧಿಕಾರಿಗಳು , ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.