ಬ್ಯಾಂಕಿನಲ್ಲಿ ಪ್ರತಿಯೊಬ್ಬರಿಗೂ ಅತ್ಯುತ್ತಮ ಹಾಗೂ ತೃಪ್ತಿದಾಯಕ ಸೇವೆ ಲಭಿಸಲಿ: ಧಮ೯ಗುರು ಓನಿಲ್ ಡಿ'ಸೋಜ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, 2018ರಲ್ಲಿ ಕೇವಲ ₹15 ಕೋಟಿ ಇದ್ದ ಬ್ಯಾಂಕಿನ ವಹಿವಾಟು ಏಳು ವರ್ಷಗಳಲ್ಲಿ ₹65 ಕೋಟಿಗೆ ತಲುಪಿದೆ. ಪ್ರಸ್ತುತ ಠೇವಣಿಗಳು ₹40 ಕೋಟಿ ಹಾಗೂ ಮುಂಗಡ ಸಾಲಗಳು ₹25 ಕೋಟಿ ಗಡಿ ದಾಟಿವೆ ಎಂದು ತಿಳಿಸಿದರು.
ಗ್ರಾಹಕರೇ ಬ್ಯಾಂಕಿನ ನಿಜವಾದ ಬ್ರಾಂಡ್ ರಾಯಭಾರಿಗಳಾಗಿದ್ದು, ಗ್ರಾಹಕ ಸೇವೆಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಸೈಬರ್ ಭದ್ರತಾ ನೀತಿಯಲ್ಲಿ ಕರ್ನಾಟಕದಲ್ಲೇ ನಂಬರ್ ಒನ್ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಬ್ಯಾಂಕ್ ಪಾತ್ರವಾಗಿದೆ. ಮುಂಬರುವ ದಿನಗಳಲ್ಲಿ ಕಟಪಾಡಿ, ದೇರಳಕಟ್ಟೆ ಹಾಗೂ ಮಂಗಳೂರು ಪಡೀಲ್‌ನಲ್ಲಿ (ಜಿಲ್ಲಾಧಿಕಾರಿ ಕಚೇರಿ ಹತ್ತಿರ) ನೂತನ ಶಾಖೆಗಳನ್ನು ಆರಂಭಿಸಲು ಯೋಜಿಸಲಾಗಿದೆ ಎಂದರು.
1912ರಲ್ಲಿ ಸ್ಥಾಪನೆಯಾದ ಎಂಸಿಸಿ ಬ್ಯಾಂಕ್ ಕರ್ನಾಟಕ ರಾಜ್ಯವನ್ನು ತನ್ನ ಕಾರ್ಯವ್ಯಾಪ್ತಿಯಾಗಿ ಹೊಂದಿದ್ದು, 114 ವರ್ಷಗಳ ಸಮರ್ಪಿತ ಸೇವೆಯನ್ನು ಪೂರೈಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಲಂಗಾರು ಹೋಲಿ ರೋಸರಿ ಚರ್ಚ್‌ನ ಧರ್ಮಗುರು ಮೆಲ್ವಿನ್ ನೊರೊನ್ಹಾ, ಸಂಪಿಗೆ ಚರ್ಚ್‌ನ ಧರ್ಮಗುರು ರೆ. ಫಾ. ವಿನ್ಸೆಂಟ್ ಡಿಸೋಜ, ಮಾಜಿ ಸಚಿವ ಅಭಯಚಂದ್ರ ಜೈನ್, ವಕೀಲ ಪ್ರವೀಣ್ ಎಸ್. ಲೋಬೊ, ಆಶ್ಲಿ ಹಾರ್ಡ್‌ವೇರ್ ಆ್ಯಂಡ್ ಸ್ಟೀಲ್ಸ್‌ನ ಮಾಲಕ ರೋಹನ್ ರಾಜೇಶ್ ಮೆಂಡಿಸ್, ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಗೂ ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು.
ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ಮೆನೆಜಸ್, ಸ್ಥಳೀಯ ನಿರ್ದೇಶಕ ಅಂಡ್ರೋ ಡಿಸೋಜ, ಪ್ರಧಾನ ವ್ಯವಸ್ಥಾಪಕ ಸುನೀಲ್ ಐ., ಮೂಡುಬಿದಿರೆ ಶಾಖೆಯ ವ್ಯವಸ್ಥಾಪಕ ರೋಹನ್ ಡಿಸಿಲ್ವಾ, ನಿರ್ದೇಶಕರು, ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮೌಂಟ್ ರೋಸರಿ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್‌ಗೆ ಬ್ಯಾಂಕ್ ವತಿಯಿಂದ ₹1 ಲಕ್ಷ ದೇಣಿಗೆ ಹಸ್ತಾಂತರಿಸಲಾಯಿತು. ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಪ್ರೆಸ್ಸಿಲಾ ಡಿಮೆಲ್ಲೊ ದೇಣಿಗೆಯನ್ನು ಸ್ವೀಕರಿಸಿದರು.
ಕ್ರೀಡಾಪಟು ಆಶ್ಲಿನ್ ಮರೀನಾ ರೋಡ್ರಿಗಸ್, ವಕೀಲ ತರ್ಶಿಶ್ ಡಿಸಿಲ್ವಾ, ದಾನಿ ಪೀಟರ್ ಫೆಲಿಕ್ಸ್ ಡಿಸೋಜಾ, ಅನಿಲ್ ಮೆಂಡೋನ್ಸಾ ಹಾಗೂ ಕ್ರೀಡಾಪಟು ಜಾಯ್ಲಿನ್ ಮುರಲ್ ಲೋಬೊ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು.
ಬ್ರಹ್ಮಾವರ ಶಾಖೆಯ ವ್ಯವಸ್ಥಾಪಕ ಓವಿನ್ ರೆಬೆಲ್ಲೋ ಸನ್ಮಾನಿತರ ವಿವರ ನೀಡಿದರು. ಜೈಸನ್ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ಅತ್ಯುತ್ತಮ ಹಾಗೂ ತೃಪ್ತಿದಾಯಕ ಸೇವೆ ಲಭಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, 2018ರಲ್ಲಿ ಕೇವಲ ₹15 ಕೋಟಿ ಇದ್ದ ಬ್ಯಾಂಕಿನ ವಹಿವಾಟು ಏಳು ವರ್ಷಗಳಲ್ಲಿ ₹65 ಕೋಟಿಗೆ ತಲುಪಿದೆ. ಪ್ರಸ್ತುತ ಠೇವಣಿಗಳು ₹40 ಕೋಟಿ ಹಾಗೂ ಮುಂಗಡ ಸಾಲಗಳು ₹25 ಕೋಟಿ ಗಡಿ ದಾಟಿವೆ ಎಂದು ತಿಳಿಸಿದರು.
ಗ್ರಾಹಕರೇ ಬ್ಯಾಂಕಿನ ನಿಜವಾದ ಬ್ರಾಂಡ್ ರಾಯಭಾರಿಗಳಾಗಿದ್ದು, ಗ್ರಾಹಕ ಸೇವೆಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಸೈಬರ್ ಭದ್ರತಾ ನೀತಿಯಲ್ಲಿ ಕರ್ನಾಟಕದಲ್ಲೇ ನಂಬರ್ ಒನ್ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಬ್ಯಾಂಕ್ ಪಾತ್ರವಾಗಿದೆ. ಮುಂಬರುವ ದಿನಗಳಲ್ಲಿ ಕಟಪಾಡಿ, ದೇರಳಕಟ್ಟೆ ಹಾಗೂ ಮಂಗಳೂರು ಪಡೀಲ್‌ನಲ್ಲಿ (ಜಿಲ್ಲಾಧಿಕಾರಿ ಕಚೇರಿ ಹತ್ತಿರ) ನೂತನ ಶಾಖೆಗಳನ್ನು ಆರಂಭಿಸಲು ಯೋಜಿಸಲಾಗಿದೆ ಎಂದರು.
1912ರಲ್ಲಿ ಸ್ಥಾಪನೆಯಾದ ಎಂಸಿಸಿ ಬ್ಯಾಂಕ್ ಕರ್ನಾಟಕ ರಾಜ್ಯವನ್ನು ತನ್ನ ಕಾರ್ಯವ್ಯಾಪ್ತಿಯಾಗಿ ಹೊಂದಿದ್ದು, 114 ವರ್ಷಗಳ ಸಮರ್ಪಿತ ಸೇವೆಯನ್ನು ಪೂರೈಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಲಂಗಾರು ಹೋಲಿ ರೋಸರಿ ಚರ್ಚ್‌ನ ಧರ್ಮಗುರು ಮೆಲ್ವಿನ್ ನೊರೊನ್ಹಾ ಭಾಗವಹಿಸಿ ಶುಭ ಹಾರೈಸಿದರು.
ಸಂಪಿಗೆ ಚರ್ಚ್‌ನ ಧರ್ಮಗುರು ರೆ. ಫಾ. ವಿನ್ಸೆಂಟ್ ಡಿಸೋಜ, ಮಾಜಿ ಸಚಿವ ಅಭಯಚಂದ್ರ ಜೈನ್, ವಕೀಲ ಪ್ರವೀಣ್ ಎಸ್. ಲೋಬೊ, ಆಶ್ಲಿ ಹಾರ್ಡ್‌ವೇರ್ ಆ್ಯಂಡ್ ಸ್ಟೀಲ್ಸ್‌ನ ಮಾಲಕ ರೋಹನ್ ರಾಜೇಶ್ ಮೆಂಡಿಸ್, ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಗೂ ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು.
ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ಮೆನೇಜಸ್, ಸ್ಥಳೀಯ ನಿರ್ದೇಶಕ ಅಂಡ್ರೋ ಡಿಸೋಜ, ಪ್ರಧಾನ ವ್ಯವಸ್ಥಾಪಕ ಸುನೀಲ್ ಐ., ಮೂಡುಬಿದಿರೆ ಶಾಖೆಯ ವ್ಯವಸ್ಥಾಪಕ ರೋಹನ್ ಡಿಸಿಲ್ವಾ, ನಿರ್ದೇಶಕರು, ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮೌಂಟ್ ರೋಸರಿ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್‌ಗೆ ಬ್ಯಾಂಕ್ ವತಿಯಿಂದ ₹1 ಲಕ್ಷ ದೇಣಿಗೆ ಹಸ್ತಾಂತರಿಸಲಾಯಿತು. ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಪ್ರೆಸ್ಸಿಲಾ ಡಿಮೆಲ್ಲೊ ದೇಣಿಗೆಯನ್ನು ಸ್ವೀಕರಿಸಿದರು.
ಸನ್ಮಾನ: ಕ್ರೀಡಾಪಟು ಆಶ್ಲಿನ್ ಮರೀನಾ ರೋಡ್ರಿಗಸ್, ವಕೀಲ ತರ್ಶಿಶ್ ಡಿಸಿಲ್ವಾ, ದಾನಿ ಪೀಟರ್ ಫೆಲಿಕ್ಸ್ ಡಿಸೋಜಾ, ಅನಿಲ್ ಮೆಂಡೋನ್ಸಾ ಹಾಗೂ ಕ್ರೀಡಾಪಟು ಜಾಯ್ಲಿನ್ ಮುರಲ್ ಲೋಬೊ ಅವರನ್ನು ಸನ್ಮಾನಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು.
ಬ್ರಹ್ಮಾವರ ಶಾಖೆಯ ವ್ಯವಸ್ಥಾಪಕ ಓವಿನ್ ರೆಬೆಲ್ಲೋ ಸನ್ಮಾನಿತರ ವಿವರ ನೀಡಿದರು. ಜೈಸನ್ ಪಿರೇರಾ ಶಿತಾ೯ಡಿ ಕಾರ್ಯಕ್ರಮ ನಿರೂಪಿಸಿದರು.

