ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆಯುವ ಏಕಾಹ ಭಜನಾ ಸುವಣ೯ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ
Sunday, November 15, 2026
ಮೂಡುಬಿದಿರೆ: ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ನ. 15ರಿಂದ 21ರವರೆಗೆ ನಡೆಯುವ ಏಕಾಹ ಭಜನಾ ಸುವಣ೯ ಮಹೋತ್ಸದಂಗವಾಗಿ ಭಾನುವಾರ ಸಂಜೆ ನಡೆದ ಭಜನಾದಿಂಡಿಗೆ ಸ್ವರಾಜ್ಯ ಮೈದಾನದಲ್ಲಿ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಚಾಲನೆ ನೀಡಿದರು.
ನಂತರ ಮಾತನಾಡಿದ ಜೈನ್ ಅವರು ಮೂಡುಬಿದಿರೆ ಜೈನಕಾಶಿ ಎಂದು ಹೆಸರು ಪಡೆಯುವಲ್ಲಿ ವಿಶ್ವಕಮ೯ ಸಮಾಜದ ಬಂಧುಗಳ ಪಾತ್ರ ಮಹತ್ವದ್ದು. ಭಾರತ ದೇಶದ ಎಲ್ಲಾ ದೇವಾಲಯಗಳಲ್ಲಿರುವ ಮೂತಿ೯ಯ ಕೆತ್ತನೆ ಕಾಯ೯ ಈ ಸಮಾಜದಿಂದಾಗಿದೆ. ಮೂಡುಬಿದಿರೆ ಸಾವಿರ ಕಂಬದ ಬಸದಿಯಲ್ಲಿರುವ ಶಿಲೆಗಳಿಂದ ಕೆತ್ತಿರುವ ಮೂತಿ೯ಗಳು ಹಾಗೂ ಅವಿಭಜಿತ ಜಿಲ್ಲೆಯಲ್ಲಿರುವ ಗೊಮ್ಮಟೇಶ್ವರನ ಮೂತಿ೯ಗಳು ಕೂಡಾ ಈ ಸಮಾಜದ ಕೊಡುಗೆ ಎಂದರು.
ರಾಜ್ಯದಲ್ಲಿ ಹಲವು ಮಂದಿ ಮುಖ್ಯಮಂತ್ರಿಗಳು, ಸಚಿವರು ಆಗಿದ್ದಾರೆ ಆದರೆ ಈ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದವರು ವೀರಪ್ಪಮೊಯಿಲಿಯವರು ಎಂದು ನೆನಪಿಸಿದ ಅವರು ಹಿರಿಯರು, ಕಿರಿಯರು ಸೇರಿಕೊಂಡು ಈ ಭಜನಾ ಕಾಯ೯ಕ್ರಮವನ್ನು ಆಯೋಜಿಸಿದ್ದು ಇದು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ವಿವೇಕ್ ಆಳ್ವ ಮಾತನಾಡಿ ಧಾಮಿ೯ಕ ಕಾಯ೯ಕ್ರಮಗಳಿಗೆ ಹೆಚ್ಚು ಒತ್ತು ನೀಡುವವರು ವಿಶ್ವಕಮ೯ ಸಮಾಜದವರು. ಇಂತಹ ಕಾಯ೯ಕ್ರಮದಲ್ಲಿ ತನ್ನನ್ನೂ ಜೋಡಿಸಿಕೊಂಡಿರುವುದಕ್ಕೆ ಕೃತಜ್ಞತೆಗಳು ಎಂದರು.
ಮುಖ್ಯಾಧಿಕಾರಿ ಇಂದು ಎಂ. ಅವರು ಶುಭ ಹಾರೈಸಿದರು.
ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಂ. ಕೆ. ಬಾಲಕೃಷ್ಣ ಆಚಾಯ೯, ದೇವಸ್ಥಾನದ 2ನೇ ಮೊಕ್ತೇಸರ ಶಿವರಾಮ ಆಚಾಯ೯ ಉಳಿಯ, 3 ನೇ ಮೊಕ್ತೆಸರರಾದ ಯೋಗೀಶ್ ಆಚಾರ್ಯ, ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್ ನ ಸಂಜನ್ ಆಚಾರ್ಯ, ಮಹಿಳಾ ಸಮಿತಿಯ ಅಧ್ಯಕ್ಷೆ ಕಸ್ತೂರಿ ದೇವರಾಜ್ ಆಚಾಯ೯, ಕಾಳಿಕಾಂಬಾ ಭಜನಾ ಮಂಡಳಿ ಸಂಚಾಲಕ ರಾಮಚಂದ್ರ ಆಚಾರ್ಯ ಸಾಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಸಮಿತಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು, ಭಜನಾ ಮಂಡಳಿಯವರು ಕಾಯ೯ಕ್ರಮದಲ್ಲಿ ಭಾಗವಹಿಸಿದ್ದರು.
ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ್ ಆಚಾರ್ಯ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು.
ಭಜನಾ ದಿಂಡಿಯು ವಿವಿಧ ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ಹೊರಟು ಶ್ರೀ ಕ್ಷೇತ್ರಕ್ಕೆ ತಲುಪಿತು. ನಂತರ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳು ನಡೆದವು.



