ಸಂತ ಫಿಲೋಮಿನಾ ಪ.ಪೂ ಕಾಲೇಜಿಗೆ ‘ಆರೋರಾ-2026 ಅಂತರ್ ಕಾಲೇಜು ಮಟ್ಟದ ಸೈನ್ಸ್ ಫೆಸ್ಟ್’ನಲ್ಲಿ ಪ್ರಶಸ್ತಿ
Monday, November 2, 2026
ಪುತ್ತೂರು: ವಿವೇಕಾನಂದ (ಸ್ವಾಯತ್ತ) ಪದವಿ ಕಾಲೇಜು ಇದರ ಆಶ್ರಯದಲ್ಲಿ ಅ.31 ರಂದು ನಡೆದ ‘ಆರೋರಾ-2026 ಅಂತರ್ ಕಾಲೇಜು ಮಟ್ಟದ ಸೈನ್ಸ್ ಟೆಸ್ಟ್‌ನಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಮೊಹಮ್ಮದ್ ಶಯನ್ ಅಬ್ಬಾಸ್ ಇವರು ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ಸುಮನಾ ರಾವ್, ಉಷಾ ರೈ, ಅವಿನಾ ಮಾಡ್ತಾ, ಡಾ. ಲತಾ ಹಾಗೂ ಸಂದೇಶ್ ಜಾನ್ ಲೋಬೋ ಉಪಸ್ಥಿತರಿದ್ದರು.