ಅಂಡರ್-23 ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಅನಘಾ ಕೆ.ಎನ್. ಆಯ್ಕೆ
ಬಿಸಿಸಿಐ ಆಯೋಜಿಸುತ್ತಿರುವ 2026-27ನೇ ಸಾಲಿನ ಅಂಡರ್-23 ಮಹಿಳೆಯರ ಟಿ-20 ಟ್ರೋಫಿ ಕ್ರಿಕೆಟ್ ಪಂದ್ಯಾಟಗಳು ಇದೇ ನವೆಂಬರ್ 14 ರಿಂದ 21 ರವರೆಗೆ ಛತ್ತೀಸ್‌ಗಡ್‌ನ ರಾಯ್ಪುರದಲ್ಲಿ ನಡೆಯಲಿದ್ದು, ಇದರಲ್ಲಿ ಇವರು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಪ್ರಕಟಿಸಿದ 15 ಜನರ ತಂಡಕ್ಕೆ ಬಿಸಿಸಿಐ ಅಧಿಕೃತ ಮುದ್ರೆಯನ್ನೊತ್ತಿದೆ.
ಎಳವೆಯಿಂದಲೇ ಕ್ರೀಡೆಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿರುವ ಅನಘಾ ಈ ಹಿಂದೆ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಅಥ್ಲೆಟಿಕ್ ಪಂದ್ಯಾಟದಲ್ಲಿ ಚಿನ್ನದ ಪದಕದ ಸಾಧನೆಯನ್ನು ಮಾಡಿದ್ದಾರೆ. ಈಗ ಕ್ರಿಕೆಟ್‌ನಲ್ಲಿಯೂ ರಾಜ್ಯ ತಂಡಕ್ಕೆ ಆಯ್ಕೆಯಾಗುವ ಮೂಲಕ ಪುತ್ತೂರಿನ ಮತ್ತು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಗೆ ಹೆಸರು ತಂದಿದ್ದಾರೆ. ಅವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮಾರ್ಗದರ್ಶನವನ್ನು ನೀಡಿದ್ದಾರೆ ಮತ್ತು ಕ್ರಿಕೆಟ್‌ನ ಆರಂಭಿಕ ತರಬೇತಿಯನ್ನು ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಇಲ್ಯಾಸ್ ಪಿಂಟೋ ಅವರು ನೀಡಿದ್ದಾರೆ. ಅವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಅಭಿನಂಧಿಸಿದ್ದಾರೆ.