ಸುಳ್ಯದಲ್ಲಿ ಭರ್ಜರಿ ಮಳೆ: ರಸ್ತೆಗಳು ಜಲಾವೃತ
Tuesday, November 3, 2026
ಸುಳ್ಯ: ಸುಳ್ಯದಲ್ಲಿ ಮಂಗಳವಾರ ಸಂಜೆ ಭಾರೀ ಮಳೆಯಾಗಿದೆ. ಇದರ ಪರಿಣಾಮ ನಗರದ ರಸ್ತೆಗಳು ಜಲಾವೃತವಾಗಿತ್ತು. ಸುಳ್ಯ ಶ್ರೀರಾಮ ಪೇಟೆ ಸೇರಿ ವಿವಿಧ ಕಡೆಗಳಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿದಿದೆ. ಕೆಲ ಕಾಲ ರಸ್ತೆಯು ಹೊಳೆಯಂತಾಗಿತ್ತು.
ಕೆಲವೆಡೆ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ.ಬೊಳುಬೈಲು ಸಮೀಪ ಮಳೆ ನೀರು ರಸ್ತೆಗೆ ನುಗ್ಗಿದೆ. ಹಲವು ಕಡೆಗಳಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿದು ವಾಹನ ಸವಾರರಿಗೆ ಮತ್ತು ಪಾದಾಚಾರಿಗೆ ಸಮಸ್ಯೆಯಾಗಿದೆ.
ಬೆಳಗ್ಗಿನಿಂದ ಮೋಡ ಕವಿದ ವಾತಾವರಣ ಇತ್ತು. ಸಂಜೆಯ ವೇಳೆಗೆ ಉತ್ತಮ ಮಳೆ ಸುರಿದಿದೆ.ಹನಿ ಮಳೆಯೊಂದಿಗೆ ಆರಂಭಗೊಂಡು ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮುರಾಸು ಚಂಡಮಾರುತದ ಪರಿಣಾಮವಾಗಿ ಎರಡು ದಿನಗಳಿಂದ ಕರ್ನಾಟಕ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದೆ.