Mangalore: ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಶಸ್ತಿ
Friday, December 29, 2023
ಸುರತ್ಕಲ್: ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ (ರಿ) ಮಂಗಳೂರು ಇವರು ಆಯೋಜಿಸಿದ
‘ನೃತ್ಯೋತ್ಕರ್ಷ-೨೦೨೩’ರ ಪ್ರಯುಕ್ತ ೧೮ ವರ್ಷಗಳ ಒಳಗಿನವರಿಗೆ ಆಯೋಜಿಸಿರುವ ‘ವ್ಯಕ್ತಿತ್ವ
ವಿಕಸನದಲ್ಲಿ ಶಾಸ್ತ್ರೀಯ ನೃತ್ಯಕಲಾಭ್ಯಾಸದ ಪಾತ್ರ’ ಎಂಬ ವಿಷಯದ ‘ರಾಷ್ಟ್ರಮಟ್ಟದ ಪ್ರಬಂಧ
ಸ್ಪರ್ಧೆಯಲ್ಲಿ ಇಡ್ಯಾ ಶ್ರೀಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿನಿ ಸಾತ್ವಿಕ ಪಿ. ಮೊಗವೀರ ಅವರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇವರು ಪುಂಡಲೀಕ ಹೊಸಬೆಟ್ಟು ಮತ್ತು ಸರಿತಾ ಪುಂಡಲೀಕ್ ಹೊಸಬೆಟ್ಟು ಅವರ ಪುತ್ರಿ ಹಾಗೂ
ವಿದುಷಿ ಸುಮಂಗಳಾ ರತ್ನಾಕರ್ ರಾವ್ ಅವರ ಶಿಷ್ಯೆ. ಉಡುಪಿ ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ಧನ ಮಹಾಂಕಾಳಿ ದೈವಸ್ಥಾನದಲ್ಲಿ ಸದರಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು.