Mangalore: ಪುಂಡಲೀಕ ಹೊಸಬೆಟ್ಟುಗೆ ಸನ್ಮಾನ
ಸುರತ್ಕಲ್: ರಾಷ್ಟ್ರೀಯ ಕ್ರೀಡಾಪಟು ಮಿ. ದ.ಕ. ದೇಹದಾರ್ಡ್ಯ ಸ್ಪರ್ಧಾ ಸಮಿತಿಯ ಅಧ್ಯಕ್ಷ ಪುಂಡಲೀಕ
ಹೊಸಬೆಟ್ಟು ಅವರಿಗೆ ಝನ್‌ಜಿಮ್ ಸುರತ್ಕಲ್ ಹಾಗೂ ದ.ಕ. ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ ಮಂಗಳೂರು ಇವರ ವತಿಯಿಂದ ಸನ್ಮಾನಿಸಲಾಯಿತು.
ಸುರತ್ಕಲ್ ಕರ್ನಾಟಕ ಸೇವಾ ವೃಂದದ ಸಭಾಂಗಣದಲ್ಲಿ ಜರುಗಿದ ಮಿ. ದ.ಕ. ದೇಹದಾರ್ಡ್ಯ ಸ್ಪರ್ಧೆ-೨೦೨೩ರ ಉದ್ಘಾಟಕರಾದ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಸಮಿತಿಯ ಅಚ್ಚುಕಟ್ಟಾದ ಯೋಜನಾ ವ್ಯವಸ್ಥೆಗೆ ಶ್ಲಾಘನೆ ವ್ಯಕ್ತಪಡಿಸಿ, ಸಮಾಜಿಕ, ಧಾರ್ಮಿಕ, ಕ್ರೀಡಾ ಕ್ಷೇತ್ರ ಸಹಿತ ಎಲ್ಲದರಲ್ಲೂ ಪುಂಡಲೀಕ ಹೊಸಬೆಟ್ಟು ಅವರು ಸಂಘಟನೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇಂತಹ ಸಂಘಟಕರು ಇದ್ದಾಗಲೇ ಕ್ರೀಡೆಯ ಬೆಳವಣಿಗೆಗೆ ಪ್ರೋತ್ಸಾಹ ಸಿಗುತ್ತದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪುಂಡಲೀಕ ಹೊಸಬೆಟ್ಟು ಅವರು, ಕ್ರೀಡೆಯೊಂದಿಗೆ ಸಮಾಜಮುಖಿ ಸೇವೆಯನ್ನೂ ಇದೇ ವೇದಿಕೆಯಲ್ಲಿ ವಿಕಲ ಚೇತನರಿಗೆ ದೇಹದಾರ್ಡ್ಯ ಸ್ಪರ್ಧೆಗೆ ಪ್ರೋತ್ಸಾಹ, ಸ್ಪೆಷಲ್ ಒಲಿಂಪಿಕ್‌ನಲ್ಲಿ ಚಿನ್ನದ ಪದಕಗಳಿಸಿದ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಅಭಿನಂದನೆ, ತೀರಾ ಕಷ್ಟದಲ್ಲಿದ್ದವರಿಗೆ ಅಕ್ಕಿ ವಿತರಣೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗಳಿಸಿದವರಿಗೆ ಸನ್ಮಾನ, ನಮ್ಮನ್ನಗಲಿಗೆ ಕ್ರೀಡಾ ಪಟುಗಳಿಗೆ ಮರಣೋತ್ತರ ಗೌರವ ಪುರಸ್ಕಾರವನ್ನು ಅವರ ಪೋಷಕರಿಗೆ ನೀಡಲಾಗಿದೆ. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಐ. ರಮಾನಂದ ಭಟ್, ಮಂಜುಕಾವ (ಪಿ.ಟಿ.ರೈ), ನಾರಾಯಣ ಶೆಣೈ, ಯಜೇಶ್ ಬರ್ಕೆ, ಪ್ರೇಮನಾಥ್ ಉಳ್ಳಾಲ್, ಅಶೋಕ್ ಶೆಟ್ಟಿ, ಕಾರ್ಯದರ್ಶಿ ದಿಲೀಪ್ ಕುಮಾರ್, ಮುರಳಿ ಎಚ್, ಜಯಪ್ರಕಾಶ್ ರಾವ್ ಇಡ್ಯಾ, ವರದರಾಜ್ ಬಂಗೇರ ಉಳ್ಳಾಲ, ಎಂ.ಜಿ. ರಾಮಚಂದ್ರ ರಾವ್ ಮುಕ್ಕ, ಭಾಸ್ಕರ ತೊಕ್ಕೊಟ್ಟು, ಕೇಶವ ಕುಳಾಯಿ, ಕೃಷಿಕ್ ಕುಳಾಯಿ, ಅಶೋಕ್ ಎನ್‌ಎಂಪಿಎ, ಪ್ರವೀಣ್ ಎನ್‌ಎಂಪಿಎ, ಕುಸುಮಾಕರ ಶೆಟ್ಟಿ, ಕಿಶೋರ್ ಶೆಟ್ಟಿ, ಪೃಥ್ವಿ ಎಂಆರ್‌ಪಿಎಲ್ ಉಪಸ್ಥಿತರಿದ್ದರು.