Chikkamagaluru: ಅಧ್ಯಕ್ಷರಾಗಿ ವಿಜಯೇಂದ್ರ ಅವಿರೋಧವಾಗಿ ಆಯ್ಕೆ
Friday, January 19, 2024
ಚಿಕ್ಕಮಗಳೂರು: ಮೂಡಿಗೆರೆಯ ಗಿರಿಜನ ವಿವಿಧೊದ್ದೇಶ ಸಹಕಾರ ಸಂಘದ (ಲ್ಯಾಂಪ್ಸ್) ಅಧ್ಯಕ್ಷರಾಗಿ ವಿಜಯೇಂದ್ರ, ಉಪಾಧ್ಯಕ್ಷರಾಗಿ ಎಂ.ಪಿ. ರೇಖಾ ಅನಿಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಗುರುಮೂರ್ತಿ ಚಿವರ ಸಮುಖದಲ್ಲಿ ಮೂಡಿಗೆರೆಯ ಲ್ಯಾಂಪ್ಸ್ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸದಸ್ಯರಾದ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೇಶವ, ನಿರ್ದೇಶಕರಾದ ಶಂಕರ್ ಮಡೆನೇರಲು, ಕೃಷ್ಣ, ರವೀಂದ್ರ, ಮಹೇಶ್, ನಾಗೇಂದ್ರ, ಚಂದ್ರೇಶ, ಸೀನಾ, ಪುಷ್ಪ, ಸವಿತ, ಸರ್ಕಾರಿ ನಾಮ ನಿರ್ದೇಶಿತ ಸದಸ್ಯ ಶಿವಪ್ಪ ಭಾಗವಹಿಸಿದ್ದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ತಂಡದ ಮುಖಂಡ ಕಳಸದ ಶ್ರೀನಿವಾಸ್ ಗೌಡ, ಲ್ಯಾಂಪ್ಸ್ ಮಹಾ ಮಂಡಳದ ನಿರ್ದೇಶಕ ಮಿಟ್ಟು ರಂಜಿತ್, ಹಿರಿಯರಾದ ದೇಜಪ್ಪ, ಮಾಜಿ ಸದಸ್ಯರಾದ ವಸಂತ, ಸುಮ ಮತ್ತಿತರರು ಅಭಿನಂದಿಸಿದರು.