Mangalore: ರಾಷ್ಟ್ರದ ಗಣರಾಜ್ಯೋತ್ಸವದ ಪಥ ಸಂಚನಲನಕ್ಕೆ ಮಂಗಳೂರು ವಿ.ವಿ.ಯ ಎನ್.ಎಸ್.ಎಸ್.ನ 4 ಸ್ವಯಂ ಸೇವಕರು ಆಯ್ಕೆ

Mangalore: ರಾಷ್ಟ್ರದ ಗಣರಾಜ್ಯೋತ್ಸವದ ಪಥ ಸಂಚನಲನಕ್ಕೆ ಮಂಗಳೂರು ವಿ.ವಿ.ಯ ಎನ್.ಎಸ್.ಎಸ್.ನ 4 ಸ್ವಯಂ ಸೇವಕರು ಆಯ್ಕೆ


 ಮಂಗಳೂರು :ಹೊಸದಿಲ್ಲಿಯ ಪಥ ಸಂಚಲನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ 4 ಮಂದಿ ಸ್ವಯಂ ಸೇವಕಿಯರು ಆಯ್ಕೆಗೊಂಡು, ಈಗಾಗಲೇ ಜನವರಿ 1ರಿಂದ 30 ವರೆಗೆ ನಡೆಯುತ್ತಿರುವ ಗಣರಾಜ್ಯೋತ್ಸವ ಶಿಬಿರದಲ್ಲಿ ಭಾಗವಹಿಸಿದ್ದಾರೆ.

ಸೈಂಟ್ ಅಲೋಶಿಯಸ್ ಕಾಲೇಜಿನ ಆಕಾಂಕ್ಷ ವೈ. ಸುವರ್ಣ, ಮಂಗಳೂರು ವಿ.ವಿ. ಕಾಲೇಜಿನ ನಂದಿತಾ. ಎಸ್, ಸುರತ್ಕಲ್ ಗೋವಿಂದದಾಸ ಕಾಲೇಜಿನ ಹಿತಾ ಉಮೇಶ್, ಉಡುಪಿ ಎಂ.ಜಿ.ಎಂ. ಕಾಲೇಜಿನ ಅನ್ವಿತ ಎಮ್. ತಂತ್ರಿ ಆಯ್ಕೆಯಾದರು.

ಕರ್ನಾಟಕ ತಂಡದ 12 ಸ್ವಯಂ ಸೇವಕಿಯರಲ್ಲಿ 4 ಮಂದಿ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕಿಯರು ಎನ್ನುವದು ಗಮನಾರ್ಹ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article