Mangalore: ರಾಜ್ಯಮಟ್ಟದ ಪಥಸಂಚಲನಕ್ಕೆ ಆಯ್ಕೆ
Thursday, January 25, 2024
ಮಂಗಳೂರು: ಮಾಣಿಕ್ ಶಾ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ದಿನದ ಪಥ ಸಂಚಲದಲ್ಲಿ ಭಾಗವಹಿಸಲು ಮಂಗಳೂರು ವಿಶ್ವ ವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯ 3 ಮಂದಿ ಸ್ವಯಂ ಸೇವಕರು ಆಯ್ಕೆಗೊಂಡಿರುತ್ತಾರೆ.
ಈಗಾಗಲೇ ಜನವರಿ 14 ರಿಂದ 26 ವರೆಗೆ ನಡೆಯುತ್ತಿರುವ ಗಣರಾಜ್ಯೋತ್ಸವ ಶಿಬಿರದಲ್ಲಿ ಭಾಗವಹಿಸಿದ್ದಾರೆ.
ಉಜಿರೆ ಎಸ್.ಡಿ.ಎಂ ಕಾಲೇಜಿನ ಚಂದ್ರಿಕ, ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜಿನ ಕಿರಣ್, ಬೆಟ್ಟಂಪಾಡಿ ಸರಕಾರಿ ಕಾಲೇಜಿನ ಪ್ರತೀಕ್ ಆಯ್ಕೆಯಾದವರು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.