Mangalore: ಡಾ.ದಯಾನಂದ ಪೈ ಕಾಲೇಜಿನಲ್ಲಿ ಸಂಭ್ರಮದ 75ನೇ ಗಣರಾಜ್ಯೋತ್ಸವ

Mangalore: ಡಾ.ದಯಾನಂದ ಪೈ ಕಾಲೇಜಿನಲ್ಲಿ ಸಂಭ್ರಮದ 75ನೇ ಗಣರಾಜ್ಯೋತ್ಸವ


ಮಂಗಳೂರು: 75ನೇ ವರ್ಷದ ಗಣರಾಜ್ಯೋತ್ವ ಆಚರಣೆಯನ್ನು ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಬಿ.ಆರ್.‌‌ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ್ ಭಂಡಾರಿ ಎಂ. ನೆರವೇರಿಸಿದರು.

ಬಳಿಕ ಅವರು ಮಾತನಾಡಿ, ನಮ್ಮ‌ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಸಮಾನರು. ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಗೌರವವನ್ನು ತಂದುಕೊಟ್ಟಿದೆ. ನಾವು ಆ ಸಂವಿಧಾನವನ್ನು ಅನುಸರಿಸಬೇಕು‌ ಎಂದು ಹೇಳಿದರು.

ನಾವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೃತಜ್ಞತೆಯನ್ನು ಸಲ್ಲಿಸಬೇಕು.‌ ಚುನಾವಣೆಯ ನಂತರ ಅಧಿಕಾರದಲ್ಲಿ ಇರುವವರು ಹೇಳಿದ ಮಾತುಗಳು ನಡೆಯುತ್ತಿದ್ದು, ಆದರೆ ಚುನಾವಣೆಯ ದಿನ ನಾವೆಲ್ಲರೂ ಚಲಾಯಿಸುವ ಮತಕ್ಕೆ ಸಮಾನವಾದ ಸ್ಥಾನಮಾನವಿರುತ್ತದೆ. ಅಧಿಕಾರಿಗಳ ಮತಕ್ಕೆ ಬೇರೆ ಸಾಮಾನ್ಯ ಜನರ ಮತಕ್ಕೆ ಬೇರೆ ಬೆಲೆ ಎಂಬುವುದು ಇರುವುದಿಲ್ಲ ಎಲ್ಲಾ ಮತಗಳೂ ಸಮಾನವಾಗಿರುತ್ತದೆ. ಅದನ್ನು ನಮಗೆ ಕೊಟ್ಟದ್ದು, ಭಾರತೀಯ ಸಂವಿಧಾನ ಎಂದು ತಿಳಿಸಿದರು.

ಈ ಸಂದರ್ಭ ಕಾಲೇಜಿನ ವಿದ್ಯಾರ್ಥಿಗಳು ದೇಶಭಕ್ತಿಗೀತೆ ಹಾಡಿದರು. ಕಾಲೇಜಿನ‌ ವಿದ್ಯಾರ್ಥಿನಿ ರಕ್ಷಿತಾ‌ ಭಾರತೀಯ ಸಂವಿಧಾನದ ಕುರಿತು ಮಾತನಾಡಿದರು. ಕಾಲೇಜಿನ ಪ್ರಾದ್ಯಾಪಕರಾದ ಡಾ. ನವೀನ್ ಕೊಣಾಜೆ ಸ್ವಾಗರಿಸಿ, ನಿರೂಪಿಸಿದರು. ಕೃಷ್ಣಪ್ರಭಾ ವಂದಿಸಿದರು.

































Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article