Mangalore: ಅನೈತಿಕ ಪೊಲೀಸ್‌ಗಿರಿ: ಮೂವರ ಬಂಧನ

Mangalore: ಅನೈತಿಕ ಪೊಲೀಸ್‌ಗಿರಿ: ಮೂವರ ಬಂಧನ

 


ಮಂಗಳೂರು: ನಗರದ ಕದ್ರಿ ಪಾರ್ಕ್‌ನಲ್ಲಿ ಶುಕ್ರವಾರ ಬೆಳಗ್ಗೆ ವಿದ್ಯಾರ್ಥಿನಿ ಜತೆಗಿದ್ದ ವಿದ್ಯಾರ್ಥಿಗೆ ಮೂವರು ಹಲ್ಲೆ ಮಾಡಿ ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ. ಈ ಸಂಬಂಧ ಕದ್ರಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ನಿತಿನ್(೧೮), ಹರ್ಷ(೧೮) ಮತ್ತು ಕಾನೂನಿನೊಡನೆ ಸಂಘರ್ಷಕ್ಕಿಳಿದ ಬಾಲಕನ ವಿರುದ್ಧ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನರ್ಸಿಂಗ್ ಕಾಲೇಜೊಂದರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಪಾರ್ಕ್‌ಗೆ ಬಂದಿದ್ದರು. ಆಗ ಮೂವರು ಬಂದು ಇವರನ್ನು ಅನ್ಯ ಧರ್ಮೀಯರ ಜೋಡಿ ಎಂದು ಭಾವಿಸಿ ಪ್ರಶ್ನಿಸಿದ್ದಾರೆ. ಆಟೋರಿಕ್ಷಾದಲ್ಲಿ ತೆರಳಲು ಮುಂದಾದಾಗ ಅದಕ್ಕೂ ಯುವಕರ ತಂಡ ತಡೆಯೊಡ್ಡಿದೆ. ಬಳಿಕ ವಿದ್ಯಾರ್ಥಿಗೆ ಹಲ್ಲೆ ನಡೆಸಿ ನಿಂದಿಸಿ ಪೊಟೋ ಮತ್ತು ವೀಡಿಯೋ ಚಿತ್ರೀಕರಿಸಿದ್ದಾರೆ. ಬಳಿಕ ಈ ಜೋಡಿ ಒಂದೇ ಸಮುದಾಯಕ್ಕೆ ಸೇರಿದ್ದು ಎಂದು ಗೊತ್ತಾಗಿದೆ.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article