Moodubidire: ಅಶ್ವತ್ಥಪುರದಲ್ಲಿ ಅಯೋಧ್ಯಾ ಸಂಭ್ರ‌ಮೋತ್ಸವ

Moodubidire: ಅಶ್ವತ್ಥಪುರದಲ್ಲಿ ಅಯೋಧ್ಯಾ ಸಂಭ್ರ‌ಮೋತ್ಸವ


ಮೂಡುಬಿದಿರೆ: ಇಲ್ಲಿಗೆ ಸಮೀಪದ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಮಂಗಳವಾರ ಅಯೋಧ್ಯಾ ಸಂಭ್ರಮೋತ್ಸವ ವಿಜೃಂಭಣೆಯಿಂದ ನಡೆಯಿತು.

ಸೋಮವಾರದಿಂದ ಏಕಾಹ ಶ್ರೀ ರಾಮನಾಮ ನಡೆಯಿತು. ಇಂದು ಬೆಳಿಗ್ಗೆ 7ರಿಂದ ರಾತ್ರಿ 8 ಗಂಟೆ ವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಪವಮಾನ ಪಂಚಾಮೃತ ಅಭಿಷೇಕ, ಸಹಸ್ರ ತುಳಸಿ ಅರ್ಚನೆ ನಡೆಯಿತು.

ಅಯೋಧ್ಯೆಯಲ್ಲಿ ನಡೆದ ಶ್ರೀ ಬಾಲರಾಮ ಮೂರ್ತಿ ಪ್ರತಿಷ್ಠಾಪನೆಯ ಸುಮುಹೂರ್ತದಲ್ಲಿ ವಿಶೇಷ ಪೂಜೆ ನಡೆಸಲಾಯಿತು.

ರಾತ್ರಿ ದೀಪೋತ್ಸವ ಸಹಿತ ಪಲ್ಲಕಿ ಉತ್ಸವ, ಪುಷ್ಪರಥೋತ್ಸವ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article